ಸುಜಾತಾ ರವೀಶ್-ಬೆಳದಿಂಗಳು,(ತನಗ ಪ್ರಕಾರದಲ್ಲಿ)

ಅಂಗಳದ ತುಂಬೆಲ್ಲ
ತಿಂಗಳನ ಸಂಭ್ರಮ
ತಂಬೆಲರ ಸಿಂಚನ
ಮನವೆಲ್ಲಾ ವಿಭ್ರಮ

ನಭ ಪರದೆಯಲಿ
ಚಂದಿರನದೇ ಆಟ
ಕವಿದಿದೆ ಸುತ್ತೆಲ್ಲ
ಬೆಳದಿಂಗಳ ಮಾಟ

ಬಾನಲ್ಲಿ ಜೊನ್ನ ಮಳೆ
ಮೀಯುತಿಹಳು ಇಳೆ
ಹೊಳೆ ಹೊಳೆಯುತ್ತಿಹ
ಜಗದೆ ಹೊಸ ಕಳೆ

ಬೆಳದಿಂಗಳ ಛಾಯೆ
ಆವರಿಸಿದೆ ಮಾಯೆ
ಹುಣ್ಣಿಮೆಯ ಈ ಹೊತ್ತು
ತರುತಲಿದೆ ಮತ್ತು


One thought on “ಸುಜಾತಾ ರವೀಶ್-ಬೆಳದಿಂಗಳು,(ತನಗ ಪ್ರಕಾರದಲ್ಲಿ)

  1. ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ಅನಂತ ಧನ್ಯವಾದಗಳು ಸರ್

    ಸುಜಾತಾ ರವೀಶ್

Leave a Reply

Back To Top