ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ನಮ್ಮಣ್ಣ ತಮ್ಮಂದಿರೇ


ಕೆಲವರ ಹಣೆಬರಹ ಇಷ್ಟೆ
ಕುಂತಲ್ಲಿ ನಿಂತಲ್ಲಿ ಕಂಡ ಕಂಡಲ್ಲಿ
ಮೂಗು ತೂರಿಸುವ ಚಪಲ
ಸರ್ವಜ್ಞನೆನಿಸಿ ಕೊಳ್ಳುವ ಬಯಕೆ, ಕಾತುರತೆ!
ಅವನಂದು ಕೊಂಡಿದ್ದು ಇದನ್ನೇ
ಸುವಾಸನೆ! ಆದರೆ
ಬಂದಿದ್ದು ಬರೆ ಕೊಳೆತ ಮೊಟ್ಟೆ ವಾಸನೆ!
ಬಲಿತ ಕೋಳಿಯೂ ಬರಲಿಲ್ಲ
ಬೆಂದ ಮೊಟ್ಟೆಯೂ ಸಿಗಲಿಲ್ಲ
ಮುಕ್ತಾಫಲಗಳೂ ಉದುರಲಿಲ್ಲ
ಕೈ ಬಾಯಿಯಿಂದ
ಜಾಣ್ಣುಡಿಗಳ ಪ್ರವಾಹ
ಮುಗಿಯಲಿಲ್ಲ!
ಪ್ರಪಂಚ ಹೀಗೇ-
ಸೂರ್ಯ ಚಂದ್ರರಿರುವ ತನಕ
ಎಲ್ಲರೂ ನಮ್ಮ ತಮ್ಮವರೇ!
ಆಪತ್ತಿಗಾಗದವರೇ
ನಡು ನೀರಲ್ಲಿ ಕೈ ಬಿಡುವವರೇ
ಆಗಾಗ ಉಪದ್ವ್ಯಾಪಿಗಳಾಗುವರೇ
ವಿಘ್ನ ಸಂತೋಷಿಗಳೇ!
ಆದರೂ ಇವರು ನಮ್ಮವರೇ
ನಮ್ಮಣ್ಣ ತಮ್ಮಂದಿರೇ!
ಡಾ.ಡೋ.ನಾ.ವೆಂಕಟೇಶ

Nice and
True Bhavoji
Thank you Sona.Thats life!!
Righty said Venkanna
Thank you Prasanna.!!
ದಿನನಿತ್ಯದ ಜೀವನದಲ್ಲಿ ನಾವೆಲ್ಲರೂ ಎದುರಿಸುವ ಸವಾಲುಗಳನ್ನು ಹೊಂದಿರುವ ಅತ್ಯಂತ ಆಸಕ್ತಿದಾಯಕ ಮತ್ತು ಅದ್ಭುತವಾದ ಕವಿತೆ.
ಒಂದಿಲ್ಲೊಂದು ಘಟನೆ ಜೀವನದ ಚಿತ್ರಣ ಕ್ಕೆ ಬಣ್ಣ ತರಿಸುತ್ತೆ ಅಲ್ವಾ!
Thank you Manjanna!
ನಮ್ಮವರೇ ನಮಗೆ ಶತ್ರುಗಳು. ಇದು ಸತ್ಯ.
ಮತ್ತೊಮ್ಮೆ ಉತ್ತಮ ಕವನ.. …… ಸೂರ್ಯ ಕುಮಾರ್ ಮಡಿಕೇರಿ.
ದಿನ ಪ್ರತಿ ನಡೆಯುವ ಪ್ರಸಂಗಗಳು ನಮಗೆ ನಮ್ಮ ಹಿತ ಶತೃಗಳ ಆಂತರ್ಯ ಬಹಿರಂಗ ಮಾಡುತ್ತದೆ, ಸೂರ್ಯ!!
ವಿಘ್ನಸಂತೋಷಿಗಳೇ!
ಆದರೂ ಇವರು ನಮ್ಮವರೇ
ನಮ್ಮಣ್ಣ ತಮ್ಮಂದಿರೇ…
ಅನುಭವದ ಒಳಕಲ್ಲಿಂದ ಹೊರಬರುವ ಅಪ್ಪಟ ಹೂರಣ! ಅಭಿನಂದನೆ ವೆಂಕಟೇಶ್ ನಿಮಗೆ
Thank you Murthy.
ಸರಿಯಾಗಿ ಹೇಳಿದ್ದೀರ.ಅನುಭವ ಬಹಳ ಪಾಠಗಳ ಮನನ ಮಾಡಿಸುತ್ತೆ ಮೂರ್ತಿ!
ಅನುಭವಗಳ ಪಾಠ ಅನನ್ಯ ಅಲ್ಲವಾ!
Thank you Murthy!