ಆಶಾ ಯಮಕನಮರಡಿ ಕವಿತೆ-ನಯನ

ಮಾತು ಮರೆತೆ ಹೋಗಿವೆ
ಈ ನಯನ ಭಾಷೆ ಕಲಿತು ಮೇಲೆ
ತುಟಿಯ ಚಲನೆ ಇಲ್ಲವೀಗ
ಬರಿ ಕಣ್ಣುಗಳದ್ದೆ ಸಂಭಾಷಣೆ

ದೃಷ್ಟಿ ಕೂಟದಲ್ಲಿ ಬೆರೆತು
ಇಷ್ಟಪಟ್ಟು ಕೂಡಿ ಕಲೆತು
ನಿಷ್ಠೆಯಿಂದ ನಲಿವು ಬದುಕು
ಇಗ ಒಪ್ಪಿಕೊಂಡಾಯಿತು

ನೇತ್ರ ಕ್ಷೇತ್ರದಲ್ಲಿ ಭೇಟಿ
ಕನಸು ರಾಜ್ಯಕ್ಕಿಲ್ಲ ಸಾಟಿ
ಮನದ ಭಾವ ಹೂದೋಟದಿ
ಬೆಳೆದಿರುವ ಪ್ರೀತಿ ಗುಲಾಬಿ

ದಾಟಿ ಹೋಗದಿರೆಂದು
ದೃಷ್ಟಿ ಸೀಮೆಯ ದಾಟಿ
ಈ ಕಣ್ಣೆ ಕಾವಲು ನಿನಗೆ
ಓ ನನ್ನ ನಯನ ಸಂಗಾತಿ


One thought on “ಆಶಾ ಯಮಕನಮರಡಿ ಕವಿತೆ-ನಯನ

  1. ಕಣ್ಣಂಚಿನ ಕುಡಿನೋಟದ ಸೆಳೆತ, ಭಾಷೆಗೂ ಮೀರಿದ ಭಾವನೆಗಳನ್ನು ಹಂಚಿಕೊಳ್ಳುವ ಆ ನಯನದ ರೀತಿ ಅದ್ಭುತ, ಅನನ್ಯ.

Leave a Reply

Back To Top