ಶ್ರೀಕಾಂತಯ್ಯ ಮಠ ಕವಿತೆ-ನನ್ನೊಳಗಿನ…

ನನ್ನೊಳಗಿನ ಜೀವಕ್ಕೆ ಒಂದು ಜೀವನ ಕೊಡು
ನನ್ನೊಳಗಿನ ಭಾವಕ್ಕೆ ಒಂದು ಭಾವನೆ ಕೊಡು

ನನ್ನೊಳಗಿನ ಕನಸುಗಳಿಗೆ ನನಸಿನ ಸಹಕಾರ ಕೊಡು
ನನ್ನೊಳಗಿನ ಕವನಗಳಿಗೆ ಮೆಚ್ಚುಗೆಯ ಸ್ಪೂರ್ತಿ ಕೊಡು

ನನ್ನೊಳಗಿನ ಆತ್ಮಕ್ಕೆ ಸಂಪೂರ್ಣ ಅನುಮತಿ ಕೊಡು
ನನ್ನೊಳಗಿನ ಸತ್ಯಕ್ಕೆ ನಿಜವಾದ ನ್ಯಾಯ ಕೊಡು

ನನ್ನೊಳಗಿನ ವಿಚಾರಗಳಿಗೆ ಅನುಮೋದನೆ ಕೊಡು
ನನ್ನೊಳಗಿನ ಯೋಚನೆಗಳಿಗೆ ಸಮಯ ಕೊಡು

ನನ್ನೊಳಗಿನ ಆಚಾರಕ್ಕೆ ಒಂದಿಷ್ಟು ಜಾಗ ಕೊಡು
ನನ್ನೊಳಗಿನ ನಿಯಮಕ್ಕೆ ಒಂದಿಷ್ಟು ಹೆಗಲು ಕೊಡು

ನನ್ನೊಳಗಿನ ಧರ್ಮಕ್ಕೆ ಫಲಪ್ರದ ಉತ್ತರ ಕೊಡು
ನನ್ನೊಳಗಿನ ಕವನಕ್ಕೆ ಕಾವ್ಯಾಂಜಲಿ ಬಿರುದು ಕೊಡು

ನನ್ನೊಳಗಿನ ಅಭಿಮಾನಕ್ಕೆ ಚಪ್ಪಾಳೆಯ ಶಬ್ದ ಕೊಡು
ನನ್ನೊಳಗಿನ ಸ್ವಾಭಿಮಾನಕ್ಕೆ ನಿನ್ನ ಬಿಗುಮಾನ ಬಿಟ್ಟು ಕೊಡು

——————————————–

Leave a Reply

Back To Top