ಕಾವ್ಯ ಸಂಗಾತಿ
ಸುಕುಮಾರ
ಕವಿತೆ
ಕಾಫಿಯಾನ ಗಜ಼ಲ್
ನಿರೀಕ್ಷಿಸುವ ಮನಸ್ಸನು ಪರೀಕ್ಷಿಸಲಾರೆನು ಗೆಳತಿ
ಬಯಸುವ ಸಂಗವನು ಜರಿಯಲಾರೆನು ಒಡತಿ
ಮನ್ನಿಸುವ ಗುಣವು ನಿನ್ನಲಿರುವುದೆಂದು ಬಲ್ಲೆನು
ಸ್ತುತಿಸುವ ಭಕ್ತೆಯನು ತೊರೆಯಲಾರೆನು ಗರತಿ
ಸಖಿಯರ ಆಸೆಯೂ ಇನಿಯನ ಜೊತೆಗೂಡಿಸುವುದಾಗಿದೆ
ಜಯಿಸುವ ಶಕ್ತಿಯನು ಕಳೆಯಲಾರೆನು ಸುಮತಿ
ಅಡವಿಯ ಕಡವೆಗೂ ತಿಳಿದಿಹುದು ಕಥಾಮಾಲಿಕೆ
ಸ್ಮರಿಸುವ ಯುಕ್ತಿಯನು ತ್ಯಜಿಸಲಾರೆನು ಸೇವಂತಿ
ಮಮತೆಯ ಜಾಡನು ಕುಮಾರ ಸೆರೆಹಿಡಿದಿರುವನು
ನಟಿಸುವ ಜಾಣ್ಮೆಯನು ಶಿಕ್ಷಿಸಲಾರೆನು ಬಸಂತಿ
ಸುಕುಮಾರ
ಚೆಂದವುಂಟು ಸರ್.
ಓದುಗರನ್ನು ಮತ್ತೆ ಓದಿಸುವ ಸಾಲುಗಳು..