ಗೊರೂರು ಅನಂತರಾಜು ಕೃತಿ “ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ” ಒಂದುವಲೋಕನ ಸಾವಿತ್ರಮ್ಮಓಂಕಾರ್ ಅವರಿಂದ

ಗೊರೂರು ಅನಂತರಾಜುರವರ  ಹೊಟ್ಟೆಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ” ಕೃತಿಗೆ ಡಾ.ನೀಲಕಂಠ ಎನ್.ಮನ್ವಾಚಾರ್, ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕರು ಮುನ್ನುಡಿ ಬರೆದಿದ್ದಾರೆ. ನಾಟಕ ಬದುಕನ್ನು ಅಥೈ೯ಸುವ ವಿಶ್ಲೇಷಿಸುವ ಮಾಧ್ಯಮವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಹಿಮ್ಮೆಟ್ಟಿಸಿ ಮುಂಚೂಣಿಗೆ ಬಂದಿತು. ನಾಟಕ ತನ್ನ ಅಂಗ. ಅವಯವಗಳಾದ ವೇಷಭೂಷಣ, ಅಂಗಾಭಿನಯ, ಸಂಗೀತ, ಸಂಭಾಷಣೆಗಳೊಂದಿಗೆ ದೃಶ್ಯ ಸಂದಭ೯ಗಳ ಸಮ್ಮೇಳನದಿಂದ ಎಲ್ಲ ಸ್ಥರದ ಜನ ಸಮುದಾಯವನ್ನು ತಲುಪಿತು. ಶ್ರೀಯುತ ಗೊರೂರು ಅನಂತರಾಜು ಅವರ ಅಧ್ಯಯನ ವ್ಯಾಪ್ತಿ (ಪಾಶ್ಚಾತ್ಯ ಮತ್ತು ಪೌರತ್ವ) ವಿಶ್ವದಗಲಕ್ಕೆ ವಿಸ್ತರಿಸಿದೆ ಎಂದಿದ್ದಾರೆ.
ಕುಮಾರ್ ಚಲವಾದಿಯವರು ತಮ್ಮ ಆಶಯ ನುಡಿಯಲ್ಲಿ ಮಾನವೀಯ ಗುಣಗಳಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ನಾಟಕದ ನಿದೇ೬ಶನ ಮಾಡುವಾಗಲೂ ಅವರ ತಾದ್ಯಾತ್ಮಕತೆಯನ್ನು ಮೆಚ್ಚಲೇಬೇಕು. ನಾಟಕದ ಪಾತ್ರಧಾರಿಗಳು ಅನಿವಾಯ೯ವಾಗಿ ಪ್ರದಶ೯ನದ ದಿನ ಕೈಕೊಟ್ಟಾಗ ತಾವೇ ಆ ಪಾತ್ರವನ್ನು ನಿರ್ವಹಿಸಿ ಎಲ್ಲರ ದುಗುಡವನ್ನು ಮರೆಸುವ ಸಮಯ ಪ್ರಜ್ಞೆ ಇವರಲ್ಲಿದೆ ಎನ್ನುತ್ತಾರೆ.  ಗೊರೂರು ಅನಂತರಾಜು ಪಡೆದ ಪ್ರಶಸ್ತಿಗಳ ಬಗ್ಗೆ ವಿವರಣಾತ್ಮಕವಾಗಿ ಪ್ರಸ್ತುತಪಡಿಸುತ್ತಾ “ಕೆಲವರು ಒಂದೆರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದರೆ ಮಹಾ ಸಾಹಿತಿಯಂತೆ
ವತಿ೯ಸುವವರ ನಡುವೆ ಗೊರೂರು ಅನಂತರಾಜುರವರು ತಮ್ಮ ಸೌಜನ್ಯ, ಶಿಸ್ತು ,ಮಾನವೀಯ ಗುಣಗಳಿಂದ ಎಲ್ಲರ ಮನಸ್ಸನ್ನೂ ಗೆಲ್ಲುತ್ತಾರೆ. ಬಹುಶಃ ಇದೇ ಕಾರಣಕ್ಕೆ ಜಿಲ್ಲೆಯಲ್ಲಿ, ರಾಜ್ಯದಲ್ಲಿ ತಮ್ಮದೇ ಕಾರಣಕ್ಕೆ ಪ್ರಸಿದ್ಧರಾಗಿದ್ದರೆ, ಇವರ ಈ ಸಾಹಿತ್ಯ ಕೃಷಿ ಸಂಘಟನಾ ಚತುರತೆ ಎಲ್ಲ ಸಾಹಿತ್ಯ ಮನಗಳಿಗೂ ಸ್ಪೂರ್ತಿಯ ಚಿಲುಮೆಯೇ ಸೈ” ಎಂದಿದ್ದಾರೆ.

ತಮ್ಮ ಮನದ ಮಾತಾದ “ನನ್ನಮಾತು” ಶೀಷಿ೯ಕೆಯಲ್ಲಿ ಗೊರೂರು ಅನಂತರಾಜುರವರು
” ಬಿಟ್ಟೆನೆಂದರೂ ಬಿಡದೀ ಮಾಯೆ” ಎಂಬಂತೆ ನಾನು ನಾಟಕ ಬಿಡಬೇಕೆಂದು ವೈದ್ಯರು ಸಲಹೆ ಮಾಡಿದರೂ ನಾನು ಬಿಟ್ಟಿಲ್ಲ. ಇದೊಂದು ಚಟವಾಗಿ ಅಂಟಿಕೊಂಡಿದೆ. ಈ ಚಟ ನಾನು ಬಿಕಾಂ ಪದವಿ ಮುಗಿಸಿ ರಾತ್ರಿ ಲಾ ಕಾಲೇಜಿಗೆ ಸೇರಿದಾಗ ಪ್ರಾರಂಭವಾದ್ದದ್ದು” ಎಂದಿದ್ದಾರೆ.
ಇವರ ಈ ಹೊಟ್ಟೆಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ ಎಂಬ ಕೃತಿಯಲ್ಲಿ ಒಟ್ಟು ೨೪ ಲೇಖನಗಳನ್ನೊಳಗೊಂಡಂತೆ ಮೊದಲ *ಹೊಟ್ಟೆಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ- ಬ್ರೆಕ್ಟ್..ಇದರಲ್ಲಿ “ಯುಜಿನ್ ಬತೋ೯ಲ್ಟ್  ಫ್ರೆಡರಿಕ್ ಬ್ರೆಕ್ಟ್” ಇವರ ಬಗ್ಗೆ ,ಇವರ ಮನ ಸ್ಥಿತಿ, ಇವರ ಕೃತಿಗಳ ಬಗ್ಗೆ ಬರೆದಿದ್ದಾರೆ. ಬ್ರೆಕ್ಟ್ ಬಾಲ್ಯ, ಅವನ ಮನಸ್ಥಿತಿ ದ್ವಂದ್ವವಾಗಲು ಕಾರಣಗಳು, ಅವನು ಮಾಡುತ್ತಿದ್ದ ಕೆಲಸ, ಅವನು ಬರೆದ ಕೃತಿಗಳ ಬಗ್ಗೆ ವಿಸ್ತ್ರುತವಾಗಿ ಬರೆದಿದ್ದಾರೆ.ಪ್ರಖ್ಯಾತ ನಾಟಕಕಾರ ಬ್ರೆಕ್ಟ್ ಒಬ್ಬ ಶ್ರೇಷ್ಠ ಕವಿಯೂ ಹೌದು. ತನ್ನ ವಂಶಸ್ಥರು ರೈತಾಪಿ ವರ್ಗದವರೆಂದು ಹೇಳಿಕೊಳ್ಳುವ ಬ್ರೆಕ್ಟ್ ಹುಟ್ಟಾ ಶ್ರೀಮಂತನೇ. ಆದರೆ ಅವನಲ್ಲಿ ಬಡವರ ಬಗೆಗೆ ಅನುಕಂಪ, ಶ್ರೀಮಂತರ ಕುರಿತು ಆಕ್ರೋಶ ಅವನಲ್ಲಿ ರಕ್ತಗತವಾಗಿತ್ತು. ಬ್ರೆಕ್ಟ್ ಮೊಟ್ಟಮೊದಲ ನಾಟಕದ ೬
ಸ್ಕಿಪ್ಟ್  ಬಾಲ್ ರಚಿತವಾದುದು ೧೯೨೮ರಲ್ಲಿ ಇದರಲ್ಲಿ ಸಮಾಜ ಬಾಹಿರನೂ ನೀತಿ ನಿಯಮಗಳ ಕಟ್ಟಿಲ್ಲದ ಸ್ವೇಚ್ಚಾಚಾರಿಯೂ ಆದ ಒಬ್ಬ ಕವಿಯ ಚಿತ್ರಣವಿದೆ. ೧೯೨೮ರಲ್ಲಿ ಬ್ರೆಕ್ಟ್ ಬರೆದು ಪ್ರದರ್ಶಿಸಿದ ದಿ ತ್ರಿ ಪೆನ್ನಿ ಅಪೆರ ಎಂಬ ಸಂಗೀತ ನಾಟಕದ ಮೂಲಕ ಯುರೋಪಿನ ರಂಗಭೂಮಿಯಲ್ಲಿ ಮಹತ್ವವಾದ ಕೀರ್ತಿ ಗಳಿಸಿದ. ಬ್ರೆಕ್ಸ್ ಹೇಳಿದ ಮಾತನ್ನು ಗೊರೂರು ಅನಂತರಾಜು ತಮ್ಮ ಕೃತಿಯ ಶೀರ್ಷಿಕೆಯಾಗಿ ತೆಗೆದುಕೊಂಡಿದ್ದು ಇದು ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಎಂಬುದು ಸತ್ಯವೇ..!
ಎರಡನೇಲೇಖನ. ಪತ್ರಿಕೋದ್ಯಮದ ಒಳ ಸುಳಿಯ ಕಮಲಾ: ವಿಜಯ ತೆಂಡಲ್ಕೂರ್
ವಿಜಯ ಧೋಂಡೋಪಂತ ತೆಂಡಲ್ಕೂರ್
ಹುಟ್ಟಿದ್ದು ಜನವರಿ ೧೯೨೮ ರಲ್ಲಿ. ತಂದೆ ಹವ್ಯಾಸಿ ರಂಗಭೂಮಿ ನಟರಾಗಿದ್ದರು. ತೆಂಡುಲ್ಕರರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಒಂದು ಪೌರಾಣಿಕ ಏಕಾಂಕ ಬರೆದು ತಾವೇ ನಿದೇ೯ಶಿಸಿ ಗೆಳಯರನ್ನು ಸೇರಿಸಿಕೊಂಡು ಪ್ರದಶಿ೯ಸಿದ ಗೆಲುವು  ಇವರದಾಗಿತ್ತು ಎಂಬುದನ್ನು ಅತ್ಯಂತ ವಿಸ್ತ್ರುತವಾಗಿ ಬರೆದಿದ್ದಾರೆ. ಇವರು ೧೯೬೧ರಲ್ಲಿ ಬರೆದ ಶಾಂತತಾ ಕೋರ್ಟು ಚಾಲೂ ಅಹೇ (ಸದ್ದು ವಿಚಾರಣೆ ನಡೀತಾ ಇದೆ) ಇವರಿಗೆ ಜನಪ್ರಿಯತೆ ತಂದು ಕೊಟ್ಟಿತು. ೧೯೭೨ರಲ್ಲಿ ಬರೆದ ಘಾಶೀರಾಮ ಕೊತ್ವಾಲ ಅನೇಕ ಬಾಷೆಗಳಲ್ಲಿ ಅನುವಾದಗೊಂಡು ಮರಾಠಿ ರಂಗಭೂಮಿಯಲ್ಲಿ ಆರು ಸಾವಿರ ಪ್ರದರ್ಶನ ಕಂಡಿತು.  
ವಿಗಡ ವಿಕ್ರಮರಾಯ, ಸುಗುಣ ಗಂಭೀರ-ಸಂಸ ‘ಕೈಲಾಸಂ ರಂಗಭೂಮಿಗೆ ಸಲ್ಲುತ್ತಾರೆ. ಆದರೆ ಕನ್ನಡದ ಮೊದಲ ನಾಟಕಕಾರ ಸಂಸರೇ ಸೈ’ ಎಂದು ಪ್ರಸನ್ನರು ಹೇಳುತ್ತಾರೆ. ಸಂಸರು ದುರಂತ ನಾಟಗಳ ರಚನೆಯಲ್ಲಿ ಮೊದಲಿಗರಿದ್ದಂತೆ ಕೈಲಾಸಂ ಕಾಮಿಡಿಯ ಪ್ರಯೋಗದಲ್ಲಿ ಮೊದಲಿಗರು.
ಎ.ಎನ್. ಸ್ವಾಮಿ ವೆಂಕಟಾದ್ರಿ ಐಯರ್ ರವರ ಕಾವ್ಯನಾಮದ ಸಂಸರವರ ಬಗ್ಗೆ, ಅವರ ವಿದ್ಯಾಭ್ಯಾಸ, ನಾಟಕ ರಚನೆಯ ಬಗ್ಗೆ ಬರೆದಿದ್ದಾರೆ. ಸಂಸರು ಬರೆದ ಮೊದಲನೆಯ ನಾಟಕ ಸುಗುಣ ಗಂಭೀರ ೧೯೧೮ರಲ್ಲಿ ಬೆಂಗಳೂರಿನ ಎ.ಡಿ.ಎ. ಸಂಸ್ಥೆ ನಡೆಸಿದ ನಾಟಕ ಸ್ಸಧೆ೯ಯಲ್ಲಿ ಎರಡನೇ ಸ್ಥಾನ ಪಡೆದಿತ್ತು.
ಬದುಕು ತುಂಬಾ ಕಠೋರ: ಆಂಟನ್  ಚಿಕೋವ್- ರಷ್ಯಾದ ಪ್ರಸಿದ್ಧ ಕತೆಗಾರ ಮತ್ತು ನಾಟಕಕಾರ ಆಂಟನ್ ಚೆಕೋವ್ ಒಬ್ಬ ಶ್ರೇಷ್ಠ ಮಾನವತಾವಾದಿ, ಕಲಾವಿದ. ಈತನ ಪ್ರಸಿದ್ಧ ನಾಟಕಗಳು ಸಮಕಾಲೀನ ರಷ್ಯನ್ ಸಮಾಜದಲ್ಲಾಗುತ್ತಿದ್ದ ಅಗಾದ ಸ್ಥಿತ್ಯಂತರವನ್ನು ಅದರ ಸಂಕ್ರಮಣಾವಸ್ಥೆಯನ್ನು ಹೃದಯಸ್ಫರ್ಶಿಯಾಗಿ ಚಿತ್ರಿಸುತ್ತದೆ.
“ಬದುಕು ತುಂಬಾ ಕಠೋರವಾದದ್ದು. ನಮ್ಮಂಥ ಅನೇಕರಿಗೆ ಅದು ಶೂನ್ಯ. ನಿಷ್ಪ್ರಯೋಜಕ ಅಂತ ಕಾಣ್ತಾಇರತ್ತೆ. ಆದರೆ ,ದಿನ ಹೋದ ಹಾಗೆ ಅದು ತಿಳಿಯಾಗ್ತಾ ನೆರವಾಗ್ತಾ ಇರತ್ತೆ ಅನ್ನೋದನ್ನೂ ನಾವು ಒಪ್ಕೋಬೇಕು. ….ಬದುಕನ್ನು ಅರ್ಥಪೂರ್ಣವಾಗಿರುವ ಸುಸಂಸ್ಕೃತಿ ಮತ್ತು ಬದುಕಲು ಅವಶ್ಯಕವಾದ ದುಡಿಮೆ ಇವರೆಡನ್ನೂ ಕ್ರಿಯಾಶೀಲವಾಗಿ ಬೆಸೆಯುವ ಗಂಭೀರ ಸಾಮಾಜಿಕ ಸಾಂಸ್ಕೃತಿಕ ಚಿಂತನೆಗಳನ್ನು ಚಿಕೋಫ್‌ನ ನಾಟಕ, ಕಥೆಗಳು ದಾಖಲಿಸುತ್ತವೆ..ಹೀಗೆ ಅವರ ಜೀವನ ಶೈಲಿಯ ಬಗ್ಗೆ ಬರೆದಿದ್ದಾರೆ.

 ‘ಕನ್ನಡ ಅಭಿಷೇಕ ನಾಟಕಮ್-‘ ಅಭಿಷೇಕ ನಾಟಕ ಭಾಸನು ರಚಿಸಿದ ರಾಮಾಯಣ ಆಧಾರಿತ ನಾಟಕಗಳಲ್ಲಿ ಮೊದಲನೆಯದು. ಇದನ್ನು ಡಾ.ಲೀಲಾ ಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಆರು ಅಂಕಗಳ ಕಿರುನಾಟಕ. ಇದರಲ್ಲಿ ಕವಿಯು ಪ್ರಾರಂಭದಲ್ಲಿ ಸುಗ್ರೀವನ ಅಭಿಷೇಕವನ್ನೂ ಕೊನೆಯಲ್ಲಿ ರಾಮವಿಭಿಷಣರ ಅಭಿಷೇಕದೊಂದಿಗೆ ಅಭಿಷೇಕ ನಾಟಕ ಎಂಬ ಹೆಸರು ಅನ್ವರ್ಥಗೊಳಿಸಿದ್ದಾನೆ.
.ಈಸೂರು ಸ್ವತಂತ್ರ ಗ್ರಾಮ ಹೋರಾಟದ ತಲೆಭಾಗದ ಜನ–ಕೆ.ವೆಂಕಟರಾಜು- ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ನಡೆದ ದಬ್ಬಾಳಿಕೆಯನ್ನು ಪ್ರತಿಭಟಿಸಿ ತನ್ನನ್ನು ತಾನೇ ಸ್ವತಂತ್ರ ಹಳ್ಳಿಯೆಂದು ಸಾರಿಕೊಂಡು ಆ ಗ್ರಾಮದ ಎಲ್ಲರೂ ಗಾಂಧಿ ಟೋಪಿಯನ್ನು ಧರಿಸಲೇಬೇಕೆಂದು ಹತ್ತು ವರ್ಷದ ಪುಟ್ಟ ಬಾಲಕನನ್ನು ಅಮಲ್ದಾರನ್ನಾಗಿ ನೇಮಿಸಿಕೊಂಡು ಬ್ರಿಟಿಷ್ ಸರ್ಕಾರಕ್ಕೆ ಎದುರಾಗುತ್ತಾರೆ.. ಕ್ವಿಟ್ ಇಂಡಿಯಾ ಮೂವ್‌ಮೆಂಟ್‌ನ ಸಂದರ್ಭ ಸೆಪ್ಟೆಂಬರ್ ೨೫ರಂದು ನಡೆದ ಘಟನಾವಳಿಯ ಹಿನ್ನಲೆಯಲ್ಲಿ ನಾಟಕ ರೂಪು ತೆಳದಿದೆ.  
ಪೌರಾಣಿಕ ರಂಗಭೂಮಿಗೆ ಬೆಳ್ಳಾವೆ ನರಹರಿ ಶಾಸ್ಕ್ರಗಳ ನಾಟಕ ಗ್ರಂಥಗಳ ಕೊಡುಗೆ- ಪೌರಾಣಿಕ ರಂಗಭೂಮಿಯ ಬೆಳವಣಿಗೆಗೆ ಅನೇಕ ನಾಟಕ ಗ್ರಂಥಗಳನ್ನು ರಚಿಸಿದ ಆಸ್ಥಾನ ವಿದ್ವಾನ್ ಬೆಳ್ಳಾವೆ ನರಹರಿ ಶಾಸ್ತ್ರಿಗಳು ೧೯೧೯ರಲ್ಲಿ ಗುಬ್ಬಿ ವೀರಣ್ಣನವರ ನಾಟಕ ಮಂಡಳಿಗೆ ಶ್ರೀ ಕೃಷ್ಣಲೀಲಾ ನಾಟಕ ರಚಿಸಿಕೊಟ್ಟರು. ಈ ನಾಟಕ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವಗಳನ್ನಾಚರಿಸಿ ಕಂಪನಿ ಸ್ಥಿರವಾಗಿ ನಿಂತಿತು. ಈ ಮಂಡಳಿಗೆ ಸದಾರಮೆ ಗುಲೇಬಕಾವಲಿ ಲಂಕಾದಹನ ಮಹಾತ್ಮ ಕಬೀರದಾಸ್, ಜಲಂದರ ನಾಟಕಗಳನ್ನು ಬರೆದುಕೊಟ್ಟರು. ೩೬ ನಾಟಕಗಳನ್ನು ಬರೆದ ನರಹರಿ ಶಾಸ್ತ್ರಿಗಳು ಪುರಾಣಗಳ ಎಲೆಕಟ್ಟನ್ನು ಅತಿಕ್ರಮಿಸದೆ ಅವುಗಳನ್ನು ತಕ್ಕಮಟ್ಟಿಗೆ ಆಧುನಿಕ ವಿಚಾರಗಳಿಗೆ ಅಳವಡಿಸಿಕೊಂಡು ಪಾಮರಂಜಕವಾಗುವ ನಾಟಕಗಳನ್ನು ರಚಿಸಿದ್ದಾರೆ.
*ರಕ್ತರಾತ್ರಿ- ನಾಟ್ಯ ಕವಿ ಕೇಸರಿ ಎಂದು ಬಿರುದಾಂಕಿಂತ ಕಂದಗಲ್ ಹನುಮಂತರಾವ್ ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಗಾಗಿ ನಾಟಕಗಳನ್ನು ರಚಿಸಿದವರಲ್ಲಿ ಪ್ರಮುಖರು. ೧೯೩೦ರ ನಂತರ ಉತ್ತರ ಕರ್ನಾಟಕದ ಅನೇಕ ವೃತ್ತಿ ಮಂಡಳಿಗಳು ಅವಲಂಭಿಸಿದ್ದು ಕಂದಗಲ್ಲರ ನಾಟಕಗಳನ್ನೇ. ಕೆ.ಬಿ.ಆರ್. ಡ್ರಾಮಾ ಕಂಪನಿ ಇವರ ರಕ್ತರಾತ್ರಿ, ಲಂಕಾ ದಹನ, ದ್ರೌಪದಿ ವಸ್ತ್ರಾಪಹರಣ, ಚಿತ್ರಂಗದಾ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿರುವ ನಾಟಕ. ೧೮ ದಿನ ನಡೆದ ಕುರುಕ್ಷೇತ್ರ ಸಂಗ್ರಾ,ಮದ ಕೊನೆಯ ಮೂರು ದಿನಗಳ ಕಥೆಯಲ್ಲಿ ಮೋಸದಿಂದ ತನ್ನ ತಂದೆಯನ್ನು ಕೊಂದ ಪಾಂಡವರ ಮೇಲಿನ ಸೇಡಿನಿಂದ ಉರಿದೆದ್ದ ಅಶ್ವತ್ಥಾಮನೇ ಈ ನಾಟಕದ ಜೀವಾಳ.
ರಂಗಭೂಮಿಯ ಅಲೆಮಾರಿ ಟಿ.ಎನ್. ಬಾಲಕೃಷ್ಣಸ್ಟೋರಿ,ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಟಿ.ಎನ್.ಬಾಲಕೃಷ್ಣರವರು ತಮಗೆ ಕವಿ ಕೇಳಿಸದಿದ್ದರೂ ಕ್ಯಾಮರಾ ಆ್ಯಂಗಲ್‌ಗಳ ಚಲನೆಯನ್ನೂ ಕ್ಯಾಮರದೊಳಗೆ ಬಳಸಿರುವ ಲೆನ್ಸ್ ಗಳನ್ನು ಅರಿತುಕೊಂಡು ಅಭಿನಯಿಸುತ್ತಿದ್ದ ಶ್ರೇಷ್ಠ ನಟರು. ಬಾಲಣ್ಣನವರ ಬದುಕಿನಲ್ಲಿ ಸಂತಸಕ್ಕಿಂತ ನೋವೆ ಹೆಚ್ಚು. ಇವರ ರಂಗ ಬದುಕಿನ ಅವಲೋಕನ ಈ ಲೇಖನ.
ರಂಗ ಬದುಕಿನ ವಿಧಿಯಾಟ- ಬಿ.ಕೆ.ಈಶ್ವರಪ್ಪ, ಗುಬ್ಬಿ ಕಂಪನಿ ೧೯೪೮ರಲ್ಲಿ ಮೈಸೂರಿನಲ್ಲಿ ಮೊಕ್ಕಾಂ ಮಾಡಿ ಪ್ರದರ್ಶಿಸಿದ ರಾಜಾ ಗೋಪಿ ಚಂದ್ ನಾಟಕ ನೋಡಲು ಬಂದ ಚಿತ್ರ ನಿರ್ದೇಶಕ, ನಿರ್ಮಾಪಕರಾದ ಬಿ.ಶಂಕರ್‌ಸಿಂಗ್ ಅವರು ನಾಟಕದಲ್ಲಿ ಮಂತ್ರಿಯ ಪಾತ್ರ ನಿರ್ವಹಿಸಿದ ಬಿ.ಕೆ.ಈಶ್ವರಪ್ಪನವರ ಅಭಿನಯ ಮೆಚ್ಚಿ ಇದೇ ವರ್ಷ ಬಿಡುಗಡೆಯಾದ ನಾಗ ಕನ್ನಿಕಾ ಸಿನಿಮಾದಲ್ಲಿ ಮಂತ್ರಿ ಪಾತ್ರ ನೀಡಿ ರಂಗಭೂಮಿಯಿಂದ ಸಿನಿಮಾರಂಗದಲ್ಲಿ ಬೆಳೆಯಲು ಕಾರಣರಾಗುತ್ತಾರೆ. ಇವರ ರಂಗ ಬದುಕಿನ ಆಟವನ್ನು ಸೊಗಸಾಗಿ ಕಟ್ಟಿಕೊಡುತ್ತಾರೆ.
ಬಣ್ಣದ ಬೆಳಕು ಬಿ.ಎನ್.ಚಿನ್ನಪ್ಪ, ವೃತ್ತಿ ರಂಗಭೂಮಿಯ ಹಿರಿಯ ನಟರಾದ ಬಿ.ಎನ್.ಚಿನ್ನಪ್ಪರವರ ಬಣ್ಣದ ಬೆಳಕು ಆತ್ಮಕಥನ ಓದುತ್ತಾ ಒಂದು ಕಾಲಘಟ್ಟದ ರಂಗಕಥನ ಬಿಚ್ಚಿಕೊಳ್ಳುತ್ತದೆ. ೧೯೨೪ರಲ್ಲಿ ೧೨ ವರ್ಷದ ಹುಡುಗ ಗುಬ್ಬಿ ವೀರಣ್ಣನವರ ಮುಂದೆ ಸಾಭಿನಯವಾಗಿ ಹಾಡಿ ಅವರನ್ನು ಮೆಚ್ಚಿಸಿ ಅವರ ಬ್ರಾಂಚ್ ಕಂಪನಿಗೆ ಸೇರಿದ ಇವರ ಬಣ್ಣದ ಬದುಕಿನ ಕಥೆ ಇದಾಗಿದೆ.
ಬರಹಕ್ಕಿನ್ನ ಸ್ಥಾನಕ್ಕೆ ಬೆಲೆ-ಬೇಲೂರು ಕೃಷ್ಣಮೂರ್ತಿ- ಲೇಖಕ ಗೊರೂರು ಅನಂತರಾಜು ತಾವು ಹಾಸನದ ಎಂ.ಕೃಷ್ಣ ರಾತ್ರಿ ಕಾನೂನು ಕಾಲೇಜಿನಲ್ಲಿ ೨ನೇ ವರ್ಷದ ಎಲ್.ಎಲ್.ಬಿ. ಓದುವಾಗ ಕಾಲೇಜು ವಾರ್ಷಿಕೋತ್ಸವಕ್ಕೆ ನಾಟಕ ಮಾಡಲು ಬೇಲೂರು ಕೃಷ್ಣಮೂರ್ತಿಯವರ ಸಾವಿತ್ರಿಯ ಸವಾಲು ನಾಟಕ ಆರಿಸಿಕೊಂಡು ಸಾವಿತ್ರಿ ಪಾತ್ರ ಮಾಡಲು ಯಾವ ಹುಡುಗಿಯೂ ಮುಂದೆ ಬಾರದೆ ಅನಿವಾಯ೯ವಾಗಿ  ಇವರೇ ಮೀಸೆ ಬೋಳಿಸಿ ರಂಗ ಪ್ರವೇಶಿಸುತ್ತಾರೆ. ಮುಂದೆ ಇದೇ   ನೂರ ಹತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ ಬೇಲೂರು ಕೃಷ್ಣಮೂರ್ತಿಯವರ ಕುರಿತಾಗಿ ಬರೆಯುವ ಗೊರೂರು ಅನಂತರಾಜು ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಬೆಂಗಳೂರು ಕೆಂಪೇಗೌಡ- ಚೌಡಹಳ್ಳಿ ಪುಟ್ಟರಾಜು ಅವರ ನಾಟಕ ಕೃತಿ ಕುರಿತ್ತಾಗಿ ಬರೆದಿದ್ದಾರೆ.
ಬೀದಿ ನಾಟಕದಿಂದ ಪುಟ್ಟಕ್ಕನ ಹೈವೇ- ಬಿ. ಸುರೇಶ್, ನಾನು ಹೆಚ್ಚು ಸಮಯವನ್ನು ಬೀದಿ ನಾಟಕಗಳಲ್ಲಿ ಕಳೆದವನು. ಇದರ ಪ್ರಭಾವ ನನ್ನ ಎಲ್ಲ ನಾಟಕಗಳ ಮೇಲೂ ಕೆಲವೊಮ್ಮೆ ನಾನು ಮಾಡುವ ಧಾರವಾಹಿಗಳ ಹಾಗೂ ಸಿನಿಮಾಗಳ ಮೇಲೂ ಆಗಿದೆ ಎನ್ನುವ ಬಿ.ಸುರೇಶ್ ೧೯೭೬ರಲ್ಲಿ ಗರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಚಿತ್ರದಲ್ಲಿ ಬಾಲನಟರಾಗಿ ನಟಿಸಿ ೧೯೮೮ರಲ್ಲಿ ಮಿಥಿಲೆಯ ಸೀತೆಯರು ಮೂಲಕ ಚಿತ್ರಕಥೆ ಸಂಭಾಷಣೆ ಲೇಖಕರಾಗಿ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇವರ ಒಂಬತ್ತು ನಾಟಕಗಳ ಕೃತಿ ಕುರಿತ್ತಾಗಿ ಬರೆಯುತ್ತಾ ಬಾಲ್ಯದಿಂದ ಪುಟ್ಟಕ್ಕನ ಹೈವೇವರೆಗೆ ಬೆಳೆದ ಬಗೆಯನ್ನು ಜೊತೆಯಲ್ಲೇ ಚಿತ್ರಿಸುತ್ತಾರೆ.
ನಾಟಕ ಜೋಕುಮಾರಸ್ವಾಮಿ-ನಿದೇ೯ಶಕ ನಿಕೋಲಸ್, ಹಾಸನದ ಹೆಸರಾಂತ ಬಂಗಾರು ಕೀಲು ಕುದುರೆ ತಂಡದಲ್ಲಿ ವಿದೂಷಕನಾಗಿ ಗಣೇಶೋತ್ಸವ ಮೆರವಣಿಗೆಯಲ್ಲಿ ಜನರನ್ನು ರಂಜಿಸಿದ ಎ.ನಿಕೋಲಸ್ ಒಳ್ಳೆಯ ಹಾಸ್ಯ ನಟ. ಇವರ ನಿರ್ದೇಶನದಲ್ಲಿ ಪ್ರದರ್ಶಿತ ಡಾ.ಚಂದ್ರಶೇಖರ್ ಕಂಬಾರರ ಜೋ ಕುಮಾರಸ್ವಾಮಿ ನಾಟಕ ವಿಮರ್ಶೆ ಬರಹ ಇದಾಗಿದೆ.
ಹೊಯ್ಸಳ ಪ್ರಶಸ್ತಿಪುರಸ್ಕ್ರುತ ಬಿ.ಎಂ. ಚಿಕ್ಕೀರಪ್ಪ, ಹಾರ‍್ಮೋನಿಯಂ ಮಾಸ್ಟರ್ ತುಮಕೂರು ಜಿಲ್ಲೆಯ ನಾಟಕದ ಮೇಷ್ಟ್ರು ಕಿರು ಪರಿಚಯ.
ಸೂತ್ರಧಾರಿಯಿಂದ ಶ್ರೀಕೃಷ್ಣನ ಪಾತ್ರದವರೆಗೆಎಚ್.ಜಿ.ಗಂಗಾಧರ್, ಹಾಸನದ ಶ್ರೀ ಶಾರದ ಕಲಾಸಂಘದ ಸಂಸ್ಥಾಪಕ ಗಾಯಕ ನಟ ಸೂತ್ರದಾರಿ ಪಾತ್ರದಿಂದ ಶ್ರೀಕೃಷ್ಣನ ಪಾತ್ರದವರೆಗೆ ರಂಗಭೂಮಿ ನಟನೆಯ ಮಟ್ಟಿಲು ಏರಿದ ಕಿರುನೋಟ.
ಕನಕದಾಸರ ಜೀವನ ನಾಟಕ- ರಂಗವಾಣಿ ಜಿ. ಮಹಾದೇವಪ್ಪ, ರಂಗಭೂಮಿಗೆ ಮೀಸಲಾದ ರಂಗವಾಣಿ ಪತ್ರಿಕೆಯ ಸಂಪಾದಕರು ಬರೆದ ಕನಕದಾಸರ ಜೀವನ ಕುರಿತಾದ ನಾಟಕದ ನೋಟ.
ಅ.ನ.ಕೃ. ಮೊದಲ ನಾಟಕದ ಸ್ವಾನುಭವ. ನಾಡಿನ ಖ್ಯಾತ ಸಾಹಿತಿ ಅ.ನ.ಕೃಷ್ಣರಾಯರು ೧೯೨೪ರಲ್ಲಿ ಮೊದಲನೆಯ  ನಾಟಕ ಮದುವೆಯೋ ಮನೆ ಹಾಳೋ ಬರೆದಾದ ಅವರ ವಯಸ್ಸು ಹದಿನಾರು. ಈ ನಾಟಕ ಬರೆದು  ಪ್ರದರ್ಶಿಸಲು ಹೊರಟಾಗಿನ ಸ್ವಾನುಭವ ಬರಹ.
ಕಾವ್ಯ ನಾಟಕ – ಸೀತೆಯ ಅಗ್ನಿ ಪ್ರವೇಶ ‘ಅಗ್ನಿ ಮುರಿದ ವಿಶ್ವಾಸ. ಮೂಲ ಹಿಂದಿಯ ಕಾವ್ಯ ನಾಟಕ. ಈ ಕೃತಿಯಲ್ಲಿ ಸೀತೆಯ ಅಗ್ನಿ ಪ್ರವೇಶದ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ನಾಟಕಕಾರರು ಸೀತೆಯ ಮನಸ್ಥಿತಿಯನ್ನು ರಾಮನೊಡನೆ ಪ್ರಶ್ನಿಸುವ ಧೈರ್ಯವನ್ನು ಮತ್ತು ವಿಶ್ವಾಸ ಮುರಿದ ಮೇಲೆ ಸೀತೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದರೂ ಉಪೇಕ್ಷಿತಳಾಗಿ ರಾಮನ ಹಿಂದೆ ಹೇಗೆ ಹೋಗುತ್ತಾಳೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ರೋಮನ್ ನಾಟಕಕಾರ ತೆರೆನ್ಸ್- ಅಂದ್ರೋಸಿನ ಕನ್ಯೆ  ರೋಮನ್ ವೈನೋದಿಕನೆಂದು ಹೆಸರುವಾಸಿಯಾದ ತೆರೆನ್ಸ್ ಕಾರ್ಥೇಜಿನಲ್ಲಿ ಜನಿಸಿದ (ಕ್ರಿ.ಪೂ.೧೯೫-೧೫೯). ಈತನನ್ನು ಒಬ್ಬ ಗುಲಮನಾಗಿ ರೋಮ್ ನಗರಕ್ಕೆ ಕೊಂಡು ತರಲಾಗುತ್ತದೆ. ಅಲ್ಲಿ ಅವನ ಒಡೆಯನೂ ಸಿನೇಟರನೂ ಆದ ತೆರೆನ್ಸಿಯುಸ್ ಲುಕಾನುಸ್‌ನು ಅವನಿಗೆ ಶಿಕ್ಷಣ ಕೊಡಿಸಿ ನಂತರ ಅವನನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುತ್ತಾನೆ. ತೆರೆನ್ಸ್ ತನ್ನ ಜೀವಮಾನದಲ್ಲಿ ಒಟ್ಟು ಆರು ವೈನೋದಿಕಗಳನ್ನು ಬರೆದಿದ್ದು ಮೊಟ್ಟಮೊದಲನೆಯ ಆಂದ್ರೋಸಿನ ಕನ್ಯೆ.  ಮಿನಾಂದೇರ್‌ನ ಆಂದ್ರಿಯಾ ನಾಟಕದ ರೂಪಾಂತರವಾಗಿದೆಯೆಂದು ಹೇಳಲಾಗಿದೆ. ಈ ಕಥೆ ಸ್ವಾರಸ್ಯಕರವಾಗಿದೆ.
ಚಳುವಳಿಯೊಡಲಿನ ವಂಚನೆಯ ‘ದಿಶಾಂತರ’- ಡಿ.ಎಸ್.ಚೌಗಲೇ-ಈ ನಾಟಕ ಉತ್ತರ ಕರ್ನಾಟಕದ ಚಿಕ್ಕೋಡಿ ಮತು ನಿಪ್ಪಾಣಿ ಪರಿಸರದಲ್ಲಿನ ಬೀದಿ ಕಾರ್ಮಿಕರ ಸಮಸ್ಯೆಗಳನ್ನು ಕೇಂದ್ರಬಿಂದುವಾಗಿ ದಿಶಾಂತರ ಮನುಷ್ಯ ಬದುಕಿನ ಹಲವಾರು ಹಲವಂಡಗಳನ್ನು ಎತ್ತಿ ತೋರುತ್ತಲೇ ಬಹು ನಿರ್ಲಕ್ಷಿತ ಸಮುದಾಯವೊಂದರ ಬವಣೆಯನ್ನು ಬಿಚ್ಚಿಡುತ್ತದೆ.
ಹಾಸನ ಜಿಲ್ಲೆಗೆ ರಂಗಭೂಮಿಯ ಕೊಡುಗೆ, ಇಲ್ಲಿ ಲೇಖಕರು ಹಾಸನ ಜಿಲ್ಲೆಯ ರಂಗಭೂಮಿ ಕುರಿತ್ತಾಗಿ ಕಿರಿದಾಗಿ  ಅವಲೋಕಿಸಿದ್ದಾರೆ.
ಮತಾಂತರ ಧಮಾ೯ಂಧತೆಯ ಹಿನ್ನಲೆ ವಿಷ್ಣುವಧ೯ನ ಶಾಂತಲೆ – ಚನ್ನರಾಯಪಟ್ಟಣದ ಡಾ. ಚಂದ್ರು ಕಾಳೇನಹಳ್ಳಿ ರಚಿತ ನಾಟಕವನ್ನು ರಂಗದ ಮೇಲೆ ಜಯಶಂಕರ ಬೆಳಗುಂಬ ಪ್ರಯೋಗಿಸಿದ ಕುರಿತ್ತಾಗಿ ಬರೆದ ವಿಮಶಾ೯ ಬರಹ.
ಹೀಗೆ ಶ್ರೀಯುತ ಗೊರೂರು ಅನಂತರಾಜು ರವರ ಹೊಟ್ಟೆಪಾಡಿನ ಮಾಕೇ೯ಟಿನಲ್ಲಿ ಸುಳ್ಳಿನ ಮಾರಾಟ ಕೃತಿಯ ೨೪ ಲೇಖನಗಳು ರಂಗಭೂಮಿಯ ಬಹುಮುಖಿ ಚಿತ್ರಣವಾಗಿ ಪುಸ್ತಕವನ್ನು ಬಹಳ ಸುಂದರವಾಗಿ ಬರೆದಿದ್ದಾರೆ. ಇಂತಹ ಇನ್ನೂ ಅನೇಕ ಕೃತಿಗಳು ಅವರ ಲೇಖನಿಯಿಂದ ಮೂಡಿಬರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.

————————————-

Leave a Reply

Back To Top