ಸುಧಾ ಪಾಟೀಲ್ ಕವಿತೆ-ಹುಡುಕಾಟ

ಹುಡುಕುತ್ತಿರುವೆ
ನನ್ನೊಳಗೆ
ನಾನೆ
ನನ್ನ
ಸದ್ಗುಣಗಳ
ನನ್ನ
ಅವಗುಣಗಳ
ಬೇಸರಿಸದೆ
ಕೆದಕುತ್ತಿರುವೆ
ಮನಸಿನ
ಆಳದ
ಭಾವನೆಗಳ
ಇನ್ನಷ್ಟು
ನನ್ನ ನಾ
ತಿಳಿದುಕೊಳ್ಳಲು
ಸುಧಾರಿಸಲು
ಅವಗುಣಗಳ
ಹೊರಹಾಕಲು
ಸದ್ಗುಣಗಳ
ಬೆಳೆಸಲು
ಪೂರ್ಣ
ಪ್ರಮಾಣದ
ಮನುಷ್ಯಳಾಗಲು
ಮಾನವೀಯತೆಯ
ಮೂರ್ತಿಯಾಗಲು
ಎಲ್ಲರೂ
ಮೆಚ್ಚುವಂಥ
ಗೆಳತಿಯಾಗಲು


8 thoughts on “ಸುಧಾ ಪಾಟೀಲ್ ಕವಿತೆ-ಹುಡುಕಾಟ

  1. ಬಹಳ ಸುಂದರ ಕವಿತೆ ಆತ್ಮಾವಲೋಕನದ ಅನುಸಂಧಾನದ ಹುಡುಕಾಟ ಸುಂದರ ಶೈಲಿ ಅಭಿವ್ಯಕ್ತಿ ಮಧುರ ಕಾವ್ಯ

  2. ತುಂಬಾ ಚೆನ್ನಾಗಿರುವ ಕವಿತೆ.ಮನದಾಳದ ಭಾವನೆ ಸುಂದರವಾಗಿ ವ್ಯಕ್ತಪಡಿಸಿರುವಿರಿ
    ಅನು ಸಕ್ರೋಜಿ

  3. ಮನುಜನು ಉತ್ತುಂಗಕ್ಕೆ ಎರುವ ವಿಚಾರಗಳು ಕವನದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top