ಕಾವ್ಯಸಂಗಾತಿ
ಸುಜಾತಾ ಪಾಟೀಲ ಸಂಖ
ನಮ್ಮೂರ ಸುದ್ದಿ
ಏನು ಹೇಳಲಿ ನಮ್ಮೂರ ಸುದ್ದಿ
ಕೇಳಿದವರಿಗೆ ಬರುವುದಿಲ್ಲ ನಿದ್ದಿ
ಬರಗಾಲ ಬೆಂಬತ್ತಿ ಕಾಡುತ್ತಿದೆ
ಭೂಮಿ ನೀರಿಗಾಗಿ ಹಂಬಲಿಸುತ್ತಿದೆ
ಇದು ಯಾರ ಶಾಪವೋ
ಪ್ರಕ್ರುತಿಯ ವಿಕೊಪವೋ
ಪಶು ಪ್ರಾಣಿ ಪಕ್ಷಿಗಳ ಗೋಳು
ಉಪವಾಸ ವನವಾಸದ ಬಾಳು
ಯಾರಿಗೆ ಹೇಳಬೇಕು ರೈತರು
ಮಳೆ ಬೆಳೆ ಅವರ ಉಸಿರು
ಇಂಥದ್ದರಲ್ಲಿ ಯುವತಿ ಯುವಕ
ಹಾದಿತಪ್ಪಿ ಪಡುತ್ತಿದ್ದಾರೆ ನರಕ
ಕುಟಕಾ, ಮಾವಾ,ಮಾದಕ ತಿಂದು
ಸೆರೆ, ಸಿಂದಿ,ಮದ್ಯಪೇಯ ಕುಡಿದು
ಇಲ್ಲ ಅವರಿಗೆ ಯಾರ ಜವ್ಹಾಬ್ದಾರಿ,ಚಿಂತೆ
ಸಣ್ಣ ವಯಸ್ಸಿನಲ್ಲೇ ಮುಗಿಸುತ್ತಾರೆ ಸಂತೆ
ಎಷ್ಟೋ ಜೀವಗಳು ಮರಗುವರು ಹೊಟ್ಟೆ ಹಸಿದು
ಅದೆಷ್ಟೋ ಜನ ಖುಷಿಪಡುವರು ಅನ್ನ ಎಸೆದು
ಬಸವಣ್ಣಾ.. ನೀವು ಒಂಬತ್ತು ಶತಮಾನಗಳ ಹಿಂದೆ
ಬಂದು ಹೋದವರು ನಮ್ಮೂರಿಗೆ ಅಂದೆ
ಬದುಕುತ್ತಿರುವೇ..ಅಪ್ಪ ಬಸವಣ್ಣ ನಾ ಇಲ್ಲಿ
ನೀವು ಮತ್ತೆ ಬರುವಿರಿ ಎಂಬ ದಿಟ ಬರವಸೆಯಲ್ಲಿ
ಎಷ್ಟುಹೇಳಲಿ ನಮ್ಮೂರ ಸುದ್ದಿ
ಕೇಳಿದವರಿಗೆ ಬರುವುದಿಲ್ಲ ನಿದ್ದಿ
ಸುಜಾತಾ ಪಾಟೀಲ ಸಂಖ