ಕಾವ್ಯ ಸಂಗಾತಿ
ಶಾಂತಾ ಕುಂಟಿನಿ
ಇದುಬಣ್ಣದ ಲೋಕವಯ್ಯ


ಏನಿಲ್ಲದಿರಲು ನಿನ್ನಲ್ಲಿ,
ನಿನಗೇನೂ ನೀಡದೆ,
ಏನೇನೂ ತುಂಬಿಡದೆ,
ನಿನ್ನ ನೀನೇ ಆಗಲು ಬಿಡುವರಯ್ಯಾ…
ನಿನ್ನ ಬಳಿಯೊಳು,
ಎಲ್ಲವು ಇರಲು
ನಾ ಮುಂದು,ತಾ ಮುಂದು
ಎಂಬಂತಿರಲು
ನಿನ್ನೊಳವರಾಗಿ ಬರಲು
ಕೊನೆಗೆ ನಿನ್ನನ್ನೇ
ಹೊತ್ತೊಯ್ಯುವರಯ್ಯಾ
ಇದು ಸತ್ಯ.. ಸತ್ಯ ಶಾಂತ
ಶಾಂತಾ ಕುಂಟಿನಿ
