ಪ್ರಭಾ ಅಶೋಕ ಪಾಟೀಲ ಕವಿತೆ-ಏನೀ ಪ್ರಕೃತಿ ವಿಸ್ಮಯವು

ಭೂರಮೆಯದು ಚೆಲುವಿನ ತಾಣವು
ಪ್ರಕೃತಿಯ ಮಾಯಾ ಜಾಲವು
ಭಾಸ್ಕರನ ಹೊಂಗಿರಣದ ಸ್ಪರ್ಶವು
ಕತ್ತಲು ಸರಿದು ಬೆಳಕಾಗು ಸಮಯವು

ಏನೀ ಪ್ರಕೃತಿ ವಿಸ್ಮಯ ವು

ಕಿರಣಗಳ ಸ್ಪರ್ಶಕ್ಕೆ ಅರಳುವ ಪುಷ್ಪವೋ
ಮಕರಂದವ ಅರಸುವ ದುಂಬಿಯವೂ
ಹಕ್ಕಿಗಳ ಚಿಲಿಪಿಲಿ ಕಲರವವು
ತಂಪಾದ ಸುಳಿಗಾಳಿಯ ಸ್ಪರ್ಶವು

ಏನೀ ಪ್ರಕೃತಿ ವಿಸ್ಮಯವು

ತುಂಬಿ ತುಳುಕಿ ಹರಿವ ಸಾಗರವು
ಜುಳು ಜುಳು ನಾದಗಳ ಸ್ವರವು
ಹಸಿರುಕ್ಕಿ ಚೆಲ್ಲುವ ವನಸಿರಿಯವು
ಗಿರಿ ಶಿಖರಗಳ ರಮ್ಯತೆಯ ಚೆಲುವು

ಏನೀ ಪ್ರಕೃತಿ ವಿಸ್ಮಯ ವು

ಬಾನಲಿ ಬಿಳಿ ಮೋಡಗಳ ಆಟವು
ಚುಕ್ಕಿ ಚಂದ್ರಮರ ತುಂಟಾಟವು
ಕಾಮನಬಿಲ್ಲ ಬಣ್ಣದ ಲೋಕವು
ಕಣ್ಮನ ಸೆಳೆಯುವ ನೋಟವು

ಏನೀ ಪ್ರಕೃತಿ ವಿಸ್ಮಯವು

ನೀ ಕೊಟ್ಟ ವಾಯುವ ಉಸಿರಾಡುವೆವು
ನೀ ಕೊಟ್ಟ ಆಹಾರವ ನಾವು ಸೇವಿಸುವೆವು
ನೀನಿಲ್ಲದೆ ಜೀವನವಿಲ್ಲ ಉಸಿರಿಲ್ಲವು
ಪ್ರಕೃತಿಯ ಮಡಿಲಲ್ಲಿ ಜನಿಸಿದ ನಾವೇ ದನ್ಯರು

ಏನೀ ಪ್ರಕೃತಿ ವಿಸ್ಮಯವು


Leave a Reply

Back To Top