ಮಧುಮಾಲತಿ ರುದ್ರೇಶ್ “ಶ್ಯಾಮನೇಕೆ ಬಾರನು””

ಹೇಳು ನೀ ತಂಗಾಳಿಯೆ ಶ್ಯಾಮನೇಕೆ ಬಾರನು
ಕಾದು ಕುಳಿತೆ ಅವನಿಗಾಗಿ ತೆರೆದು ಮನದ ಕದವನು

ಕದಪು ಸವರಿ ಮಾಯವಾಗೊ ಅವನದೆಂಥ ಮಾಯೆಯೋ
ಒನಪು ತೋರಿ ನಲಿವ ಬಯಕೆ ನನ್ನದೆಂಥ ಆಸೆಯೋ

ಮುತ್ತಿಟ್ಟು ಕಾಡುವ ಮುಂಗುರುಳ ಸರಿಸು ಬಾ ಮುರಾರಿ
ಎನಿತು ಸೊಗಸು ನಿದಿರೆಯಲೂ ಕಾಡುವ ನಿನ್ನ ಮೋಹದ ಪರಿ

ಮುಕುಂದನೆಂದೆಣಿಸಿ ತರುವ ತಬ್ಬಿದೆ ಭ್ರಮೆಯಲಿ
ಮಾರ್ಧನಿಸುತಿದೆ ಕೊಳಲ ಗಾನ ಬಿಡದೆ ಎನ್ನ ಎದೆಯಲಿ

ಯಮುನೆಯಲೆಯಲೂ ತೇಲಿ ಬರುವ ನಿನ್ನ ಬಿಂಬ
ಎಲ್ಲಿ ನೋಡಲಲ್ಲಿ ಕೃಷ್ಣನೆಂಬ ಪ್ರತಿಧ್ವನಿ ಬನದ ತುಂಬ

ಈ ಬೆಳದಿಂಗಳಿರುಳೂ ತಂಪೆನಿಸುತಿಲ್ಲ ಮಾಧವ
ಕಾಯಿಸದೆ ಈ ರಾಧೆಯ ತೋರಿ ಬಿಡು ನಿನ್ನ ಮೊಗವ


3 thoughts on “ಮಧುಮಾಲತಿ ರುದ್ರೇಶ್ “ಶ್ಯಾಮನೇಕೆ ಬಾರನು””

  1. ಕಾವ್ಯ ಸಂಗಾತಿ ಬರಹಗಾರರಿಗೆ ಅತ್ಯುತ್ತಮ ವೇದಿಕೆ..ಬರಹಕ್ಕೆ ತಕ್ಕ ಚಿತ್ರಗಳೊಂದಿಗೆ ಪ್ರಕಟಿಸುವ ಉತ್ತಮ ಕಾರ್ಯ.ಸಾವಿರಾರು ಓದುಗರಿಗೆ ಏಕಕಾಲಕ್ಕೆ ಒದಗಿಸುವ ಕಾರ್ಯ ಶ್ಲಾಘನೀಯವಾದದ್ದು. ಈ ವೇದಿಕೆ ಹೆಚ್ಚಿನ ಓದುಗರನ್ನು ಆಕರ್ಷಿಸಲಿ ಎಂಬ ಸದಾಶಯ ನಮ್ಮದು.
    ಮಧುಮಾಲತಿರುದ್ರೇಶ್

Leave a Reply

Back To Top