ಕಾವ್ಯ ಸಂಗಾತಿ
ವಸಂತ್ ಕೆ. ಹೆಚ್
ನನ್ನವ್ವ
ಹೆತ್ತಳು ನನ್ನವ್ವ
ನವಮಾಸ ಹೊತ್ತು
ಅತ್ತು ಕರೆದು
ನೋವು ನುಂಗಿ
ಹೆತ್ತಳು ನನ್ನವ್ವ||
ಹರುಕು ಸಿರೆಯನ್ನುಟ್ಟು
ಮುರುಕು ರೊಟ್ಟಿಯ ತಿಂದು
ಲಾಲನೆ-ಪಾಲನೆಯ ಮಾಡಿ
ಹೆತ್ತಳು ನನ್ನವ್ವ||
ಬಿಂಕ ಬಿನ್ನಾಣವಿಲ್ಲ
ಓಣಿಯ ತುಂಬ
ಆಣೆಯ ಮಾಡಿ
ಟೊಂಕ ಕಟ್ಟಿದಳು
ಸಂಸಾರವೆಂಬ ನೊಗವನ್ನೊತ್ತು
ಹೆತ್ತಳು ನನ್ನವ್ವ||
ಬಿದಿಗೆ ಚಂದ್ರಮನಂತೆ
ಹಣೆಯ ಮೇಲೆ ಬೊಟ್ಟನ್ನಿಟ್ಟು
ದೊರೆಯೆ ನೀನು ಜಗವ ಗೆಲ್ಲು
ಲಾಲಿ ಹಾಡಿ ನಲಿದು
ಹೆತ್ತಳು ನನ್ನವ್ವ ||
ದುಗುಡವೆಲ್ಲ ದೂರ ಮಾಡಿ
ಕಂದನನ್ನ ಹಾಡಿ ಹರಸಿ
ತುತ್ತನಿಟ್ಟು ಮುತ್ತುಕೊಟ್ಟು
ಪದವ ಹಾಡಿ
ಹೆತ್ತಳು ನನ್ನವ್ವ||
ವಸಂತ್ ಕೆ. ಹೆಚ್
ಕವಿತೆಯ ಉದ್ದೇಶ ಈಡೇರಿ,ಗೆಲುವು ಸಾಧಿಸಿದೆ
೦೦೦೦
ಜಿ,ಎಸ್.ಪ್ರಕಾಶ್,ಬೆಂಗಳೂರು ೯೭