ಅನಸೂಯ ಜಹಗೀರದಾರ ಕವಿತೆ- ಬೆಂಕಿ ಬೆಳಕಾದ ಪರಿ

ಒಂದು ಮಾತು
ಗಂಟಲಿನಾಚೆ
ಹೊರಬರದೇ
ಉಳಿದುಕೊಂಡಿತು

ಉಗುಳಿದಲ್ಲಿ
ನುಂಗಿದಲ್ಲಿ
ಸುಡುವ ಭಯ
ಕಾಡತೊಡಗಿತು

ಈ ವಿಷಯವ
ಹೃದಯಕ್ಕೆ
ವರ್ಗಾಯಿಸಿದೆ

ರೇಚಕದಿಂದ
ಹಾಯ್ದ
ಉಸಿರಿನಂತೆ
ಸಿಪಿಯುನಲ್ಲಿ
ಸಂಸ್ಕರಿಸಿದಂತೆ
ಉತ್ತರವಿತ್ತು

ಬೆಂಕಿ ಬೆಳಕಾಗಿಸು
ಗಂಟಲಿನಲ್ಲಿ
ಉರಿ ಸಂಸ್ಕರಿಸು
ಹೃದಯದಲ್ಲಿ

ಆಗ
ಆ ಮಾತು ಬೆಳಕಾಗಿ
ಮಾರ್ಪಾಡಾಗುತ್ತದೆ
ಉಗುಳಿದರೂ
ನುಂಗಿದರೂ
ಬೆಳಕೇ ಬೆಳಕು…!

ಮಾನಿಟರ್ ಉತ್ತರಿಸಿತ್ತು.
ಅದರಲ್ಲಿಯೂ ಬೆಳಕಿತ್ತು


Leave a Reply

Back To Top