‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ

ಮರಣ’ದ ಮನೆಯಲ್ಲಿ
‘ಮಳೆ’ ಸುರಿಯುತ್ತಲೇ
ಇದೆ….!

ಸುರಿಯುತ್ತಿರುವ ಮಳೆಯನ್ನು
ಮರಣ ಹೊಂದಿರುವ
ವ್ಯಕ್ತಿಯ ಸಂಬಂಧಿಕರು
ಶಾಪಿಸುತ್ತಲೇ ಇದ್ದರು…!

ಹಾಳಾದ ಮಳೆ…!
ಸುರಿಯುತ್ತಲೇ ಇದೆ…!

ಆಗ ಮೆಲ್ಲನೆ
ಮಳೆಯೂ ನುಡಿಯಿತ್ತು…!!

ಸದಾ ಕಾಲ
ಮಳೆಯನ್ನು ಪ್ರೀತಿಸುತ್ತಿದ್ದ
‘ಜೀವ’ದ ಮರಣಕ್ಕೆ
ಬರದೇ ಇರಲು
ನನ್ನಿಂದ ಸಾಧ್ಯವೇ…?!!.


.

Leave a Reply

Back To Top