ಕಾವ್ಯ ಸಂಗಾತಿ
ಡಾ. ಖಾಜಿ ಅಮೀರುದ್ದೀನ್
ಏನನ್ನು ಸಾಧಿಸಲಾಯಿತು!?

ಮುಗ್ಧ ಜೀವಿಗಳ ಬಲಿ ಪಡೆದು
ಮುದ್ದುಗಳ ಮೇಲೆ ಮದ್ದು ಸುರಿದು
ರಕ್ತದ ಹೊಳೆಯನು ಹರಿಸಿ
ನೆಲದ ಬಸಿರು ಬಗೆದು
ಸಾವಿರಾರು ಜೀವಗಳ ಅಪಹರಿಸಿ
ಸಿಗಿದು, ಸಿಕ್ಕ ಸಿಕ್ಕಲೆಲ್ಲಾ ಬಗೆದು
ಒಣಜಂಬದಿ ಮತ್ಸರವ ಮೆರೆದು
ತಮ್ಮ ಬೇಳೆಯ ಬೇಯಿಸಿಕೊಳ್ಳಲು
‘ಅಹಂ’ನ್ನು ವಿಜೃಂಭಣೆಗೈಯ್ಯಲು
ವಿನಾಶದ ಮುನ್ನುಡಿ ಹಾಡಿ
ನೆತ್ತರಿನ ಕೋಡಿ ಹರಿಸಿ
ಏನನ್ನು ಸಾಧಿಸಲಾಯಿತು!
ಏನನ್ನು ಸಾಧಿಸಲಾಯಿತು!?
ಡಾ. ಖಾಜಿ ಅಮೀರುದ್ದೀನ್
