ಕಾವ್ಯ ಸಂಗಾತಿ
ಶ್ರೀಕಾಂತಯ್ಯ ಮಠ
ಜನರ ಮಧ್ಯೆ ನಾನು
ಹೊರಗ ಹೋಗಿ ಬಂದಾಗ ಹೊರ ಜನರು ವಿಚಿತ್ರ
ಒಳ ಕರೆದು ಇದ್ದಾಗ ಒಳ ಬಂದ ಜನರು ವಿಚಿತ್ರ
ಒಳಗೊಂದು ಹೊರಗೊಂದು
ಏನೂ ತಿಳಿಯದ ರಹಸ್ಯ
ಒಬ್ಬರ ಮ್ಯಾಲ ಒಬ್ಬರು ಹೇಳೊದು ಕೇಳಿ ಇದೆಂಥ ಸಮಸ್ಯೆ
ಯಾರ ಬಳಿ ಯಾವುತ್ತರ ತಿಳಿಯದ ಜನರ ಜಗತ್ತು
ನಂಬಿದರ ಹಿಂದ ಮಾತು
ಹೊರ ದಬ್ಬಿದರ ನೂರು ಮಾತು
ಎಂಥಾ ಮಾತು ನಂಬಿಕೆಯಿಲ್ಲದ ಕನಸುಗಳು
ಆಡಿದರೆ ನೂರೆಂಟು ವೇದಗಳು
ಕೂಡಿದರೆ ನೂರೆಂಟು ನೆಪಗಳು
ಅಡ್ಡಾದಿಡ್ಡಿ ಬಂದರೆ ಎಡುವುದು ಕಾಲುಗಳು
ಯಾರೇನು ಯಾವಾಗೇನು ತೊಂದರೆ ಕಲಿಯುಗ ಕಾಲವಿದು.
ಬೆಣ್ಣೆಯಂತೆ ನಯ ನಾಜೂಕು ಮನಸ್ಸುಗಳು
ವಿಷವಾದ ವಿತಂಡವಾದಕ್ಕೆ ಅನ್ಯಾಯದ ಕಟೆ ಕಟೆ
ವಿಷಾದ ಕೊಡದ ಜನರ ಮಧ್ಯೆ ಅಘಾತ
ಗಾಯದಲ್ಲಿ ಮುಂದುವರೆದ ಬದುಕು.
ಕೊನೆಯನ್ನು ವಿರಹದಿಂದ ಕೊನೆಗಾಣಿಸುವ ಹುನ್ನಾರ
ಕೊನೆಯಲ್ಲಿ ಕಣ್ಣೀರಿನ ದುಃಖದಲ್ಲಿ ಕೊನೆ ಮಾತು ಸಾಂತ್ವಾನ
ಒಂದಿಷ್ಟು ಸಮಾಧಾನದ ಸಂಧಾನ
ಕೊಡೊದಿಲ್ಲ ಜೀವಂತ ಜೀವದಾನ.
——————————
ಶ್ರೀಕಾಂತಯ್ಯ ಮಠ