ಕಾವ್ಯ ಸಂಗಾತಿ
ಡಾ.ಶಶಿಕಾಂತ .ಪಟ್ಟಣ ಪುಣೆ
ಹೋಗೋಣಾ
ಹೋಗೋಣಾ
ನಾನು ನೀನು
ಯಾರು ಇರದ ಊರಿಗೆ
ಸದ್ದಿರದ ಹಾದಿಗೆ
ಒಲುಮೆಯ ಗೂಡಿಗೆ
ಹೊಸ ದಿಕ್ಕಿನ ಹೆಜ್ಜೆಗೆ
ಜಾತಿ ಧರ್ಮ ಇರದ
ಕಷ್ಟ ನೋವು ಹೊರದ
ಸಾಲ ಶೂಲವಿರದ
ಒಡಲ ಚೀಲಕೆ ಹಸಿವಿರದ
ನಡೆವ ಪಯಣ ಕತ್ತಲೆ
ಹೊಸ ಸೂರ್ಯದ ಬೆಳಕಿಗೆ
ಬೇಡ ಮಠ ಮಸೀದೆ
ಚರ್ಚು ಗುಡಿ ವಿಹಾರವು.
ಕೊರೆವ ಘಂಟೆ ಕರ್ಕಶ .
ಭಜನೆ ನಮಾಜಿನ ಶಬ್ದವು .
ಸಾಗಬೇಕು ನಾನು ನೀನು
ಹೊಸ ಬದುಕಿನ ಭಾಷೆಗೆ.
ಸತ್ಯ ಸಮತೆಯ ಬಟ್ಟೆಗೆ
ಶಾಂತಿ ಪ್ರೀತಿಯ ಮಂತ್ರಕೆ.
ಡಾ.ಶಶಿಕಾಂತ .ಪಟ್ಟಣ ಪುಣೆ
ಅರ್ಥ ಪೂರ್ಣ ಭಾವ ಪ್ರಜ್ಞೆ
ಜೀವನದ ಆಗುಹೋಗುಗಳನ್ನು ಬಿಟ್ಟು … ಸತ್ಯ ಸಮತೆಯ ಹಾದಿಯಲ್ಲಿ … ಶಾಂತಿ ಮಂತ್ರವ
ಅರಸುತ್ತಾ ಬೆಳಕಿನ ಕಡೆಗೆ ಸಾಗುವ ಕವನ ಅರ್ಥಪೂರ್ಣವಾಗಿ ಮೂಡಿ ಬಂದಿದೆ…
ಡಾ.ಶಶಿಕಾಂತ ಪಟ್ಟಣರವರ ಕವಿತೆ ಸಂವೇದನೆ ನಾನು ನೀನು ಎನ್ನುವಲ್ಲಿ ವಿಶ್ವ ಪ್ರತಿನಿಧಿಸು ಏ.
ಕತೆಯ ಹರಿಕಾರಾಗಿ ಮನ.ಮನಗಳ ಸಮ್ಮೀಲಕ್ಕೆ
ಕರೆ ಕೋಡುತ್ತಾರೆ.ಅಲ್ಲದೆ ನಾವು ಮತಾಂದತೆಯಲಿ ಕಟ್ಟಿಕೊಂಡ ಸಾಂಕೇತಿಕ ಕುರುಗಳು ಬಿಟ್ಟು.ನಮಗೆ ಬೇಕಾದ ಪ್ರೀತಿ. ಸಮತೆ ಬಾಳಯಾಣದ ಕಡಗೆಯೆಂದು ಕವಿಯ ಅಂತರಂಗದ ತುಡಿತವಾಗಿದೆ.
ಡಾ.ಕಸ್ತೂರಿ ದಳವಾಯಿ. ಗದಗ.ಕಾಲೇಜು.
ಡಾ.ಕಸ್ತೂರಿ ದಳವಾಯಿ.ಕವಿಯ ಅಂತರಂಗದ ತಮುಲವು.ನಾನ.ನೀನು ಜಾಗತಿಕ ಪ್ರತಿನಿಧಿಯಾಗಿ ಏಕತೆಯ ಕಡಗೆ ಸಾಗೋಣ ಅಲ್ಲದೆ. ಜನನ ಅವುಕಟ್ಟಕೂಂಡ ಸಾಂಜೇತಿಕೆಳ.ಬಿಸೋಡೋಣ.
ಅಗತ್ಯ ವಿರುವ.ಪ್ರೀತಿ. ಭಾತೃತ್ವ ಬಿತ್ತೋಣ ವೆನ್ನತ್ತಾರೆ.ಕವಿ .
ಎಂತಹ ಅದ್ಭುತ ಕಲ್ಪನೆ ಮತ್ತು ಅಭಿವ್ಯಕ್ತಿ ಸರ್ ನಾನು ನಿಮ್ಮ ಸಾಹಿತ್ಯ ಅಭಿಮಾನಿ
ಯಾರೂ ಇರದ,ಯಾರೂ ಬರದ ಪಯಣ ಅದು ಒಲವ ಪಯಣ.ಸುಂದರ ಭಾವ ಸರ್
ಸತ್ಯದ ಜೊತೆಗೆ ಹೆಜ್ಜೆ ಹಾಕುವ ಆಶಯ ಸ್ಪಷ್ಟ
ಸರ್ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ
ಲಕ್ಷ್ಮಿ ಕಾಯಕದ ಗದಗ
ಸುಂದರ ಕಾವ್ಯ ಲಹರಿ
ಅಪ್ರತಿಮ ಸಾಹಿತ್ಯ ಸರ್ ಭರವಸೆಯ ಬೆಳಕು
ಪ್ರಭುದ್ದ ಚಿಂತನೆ ಕವನ ಕಾವ್ಯ ದಲ್ಲಿ ಮೂಡಿ ಬಂದಿದೆ ಸರ್
ಅರ್ಥಪೂರ್ಣವಾದ
ಪ್ರೀತಿಯ ಭಾವ