ಕಾವ್ಯ ಸಂಗಾತಿ
ಡಾ.ಕಸ್ತೂರಿ ದಳವಾಯಿ
ಬಂಗಾರ ಹಬ್ಬ
ಮಹಾನವಮಿ ದಸರಾ
ಪ್ರತಿ ಸಂವತ್ಸರದ ಸವಿಯುವ ಹಬ್ಬ
ಕಳೆದ ಇಪ್ಪತ್ತೋಂದು ಇಪ್ಪತ್ತೆರಡು ಮತ್ತು
ನಾವು ಜಲ ವರ್ಷ ವೆಂದು
ಕರೆದು ಸಂಭ್ರಮಸಿದ್ದು
ಆ ಮಳೆರಾಯ ಹುಚ್ಚೆದ್ದು
ಸುರಿದು ಕೆರೆ.ಭಾವಿ.ಹಳ್ಳ. ಹೊಳೆ ನದ.ನದಿಗಳು
ತುಂಬಿ ಸಂಭ್ರಮಸಿದಾಗ.
ನಮಗೆಲ್ಲಾ.ಹರುಷವೊ.
ಹರ್ಷ. ಆ ವರುಷವ
“ಜಲ” ವರ್ಷವೆಂದೆ
ಕರೆದೆವು ಮನೋಲ್ಲಾಸದಿ
ನಮಗೆ ಅನ್ನವನೀಯುವ
ಆಳಾಗಿ
ದುಡಿದು ಅರಸನಾಗುವ
ರೈ್ತನ ಪರಿ ಬಣ್ಣಿಸದಸಳ
ಜೀವ ಜಾಲವು
ಅರಿದರೆ ಛಂದ
ರೈ್ತನ ಕೈ್ಗೆ ಹತ್ತಿದ
ಮಣ್ಣಿನ ಧೂಳು
ಸೈನಿಕನ ಕೈ್ಗೆ ಹತ್ತಿದ
ರಕ್ತದ ಕಲೆ
ಶಿಕ್ಷಕನ ಕೈ್ಗೆ ಹತ್ತಿದ
ಚಾಕನ ಧೂಳು
ಯಾರಿಂದಲೂ ಬೆಲೆ
ಕಟ್ಟಲಾಗಲ್ಲಾ
ಅದಕ್ಕೆ ಒಕ್ಕಲಿಗ
ನಕ್ಕರೆ ಜಗವೆಲ್ಲಾ
ಸಂತಸ.
ಒಕ್ಕದಿದ್ದರೆ
ಬಿಕ್ಕುವುದು.ಜಗತ್ತು
ಹುಯ್ಯೊ ಮಳೆರಾಯ
ಮುಂಗಾರಿನ ಪೂರಾ
ಕೊಡಲಿಲ್ಲ
ಹೀಂಗಾರಿನ ಫಲ
ಸಸ್ಯ ಶಾಮಲೆ
ನಮ್ಮನ್ನೆಲ್ಲಾ.ನಗಿಸಲಿ
ಅನ್ನದೊರೆಯ ಭೂ ತಾಯಿತಂಪಾಗಿ
ಸೊಂಪಾಗಿ ಸಡಗರದಿ
ಓಲೈ್ಸಲಿ.
ನಾಡ ದಸರೆಯು ಚಾಮುಂಡಿಯ.ಕೃಪೆಯಿಂದ
ವರುಣ ಆರ್ಭಟಿಸಿಲೆಂದು
ಮಹಾನವಮಿಯ
ಹರುಷದಿ.ಬನ್ನಿ. ಎಲ್ಲರೂ ಬನ್ನಿ
ಬನ್ನಿ ಮುಡಿಯೋಣ
ಬಂಗಾರ ಕೊಟ್ಟು
ಬಂಗಾರದಂಗ ಬಾಳೋಣ
ಡಾ.ಕಸ್ತೂರಿ ದಳವಾಯಿ