ಕಾವ್ಯಸಂಗಾತಿ
ಅರುಣಾ ನರೇಂದ್ರ
ಗಜಲ್
ಪ್ರಾಜ್ಞರ ನಡುವಿನ ಹೂರಣ ನೀನು
ಬತ್ತದ ಬಾಳ ಬೆಳಕಿನ ಕಿರಣ ನೀನು
ಎಷ್ಟು ದುಡಿದರೂ ದಣಿವಿರದ ಫಕೀರ
ಉಲ್ಲಾಸ ಉತ್ಸಾಹದ ತರುಣ ನೀನು
ಕಷ್ಮಲವೆ ಇಲ್ಲದ ಮಗುವಿನ ಮನಸು
ತಾಯಿ ಮಮತೆ ಬೆರೆತ ಕರುಣ ನೀನು
ಜ್ಞಾನದಾಗರ ನೀನಾವ ದೇವರ ವರವೊ
ಮಾತು ಮನಕೆ ನಿಲುಕದ ಸ್ಫುರಣ ನೀನು
ನಿನಗೆ ನೀನೇ ಸಾಟಿ ನನ್ನೆದೆಯ ಪದಕ
ಹುಚ್ಚಿ ಅರುಣಾಳ ಹರಣದ ಹರಣ ನೀನು
ಅರುಣಾ ನರೇಂದ್ರ
ಸುಂದರ ಸಾಲುಗಳು