ಸುಧಾ ಪಾಟೀಲ್ ಕವಿತೆ-ಆಗಿಬಿಡು

ಕಾವ್ಯಸಂಗಾತಿ

ಸುಧಾ ಪಾಟೀಲ್

ಆಗಿಬಿಡು

ಬೆಳಕು ಪಸರಿಸುವ ಮುನ್ನ
ಬೆಳಕಾಗಿ ಬಿಡು
ಜ್ಞಾನ ಹಂಚುವ ಮುನ್ನ
ಜ್ಞಾನದೀವಿಗೆಯಾಗಿ ಬಿಡು
ವಿಷಯವನ್ನು ಅರುಹುವ ಮುನ್ನ
ವಿಶೇಷಜ್ಞನಾಗಿ ಬಿಡು
ಪ್ರೀತಿಯನ್ನು ಅಪ್ಪಿಕೊಳ್ಳುವ
ಮುನ್ನ ಪ್ರೇಮವೆಂಬ
ಆಲದ ಮರವಾಗಿ ಬಿಡು

ವಚನವನ್ನು ಅರಿಯುವ ಮುನ್ನ
ವಚನದ ಕುರುಹಾಗಿ ಬಿಡು
ದಾಸೋಹವ ಮಾಡುವ ಮುನ್ನ
ಶರಣತತ್ವವ ನಂಬಿ ಬಿಡು
ಗುರುವನ್ನು ಅನುಸರಿಸುವ ಮುನ್ನ
ನೀನೇ ಗುರುವಾಗಿಬಿಡು

ಲಿಂಗವ ಪೂಜಿಸುವ ಮುನ್ನ
ಲಿಂಗದಲ್ಲಿ ಲೀನನಾಗಿ ಬಿಡು
ಬಾರದ ಭಾಗ್ಯವ ಬಯಸುವ ಮುನ್ನ
ನೀನೇ ಭಾಗ್ಯದಾತಳಾಗಿ ಬಿಡು
ಬೇರೆಯವರನ್ನು ಆಲಿಸುವ ಮುನ್ನ
ನೀನೇ ಎಲ್ಲರಿಗೂ ಕಿವಿಯಾಗಿ ಬಿಡು

ಸಂತೋಷವ ಹುಡುಕುವ ಮುನ್ನ
ನೀನೇ ಆನಂದದಿಂದ
ಇದ್ದು ಬಿಡು
ನೆರಳು ಅರಸುವ ಮುನ್ನ
ನೀನೇ ಆಶ್ರಯದಾತಳಾಗಿ ಬಿಡು

ಯಶಸ್ಸನ್ನು ಮುಟ್ಟುವ ಮುನ್ನ
ಶಿಖರದ ಉತ್ತುಂಗವ ತಲುಪಿ ಬಿಡು
ಬಾಳ್ವೆಯ ಒಗ್ಗೂಡಿಸುವ ಮುನ್ನ
ಸಹಕಾರದ ಪಾಠ ಕಲಿತು ಬಿಡು
ಜೀವನದ ಅರ್ಥವ ಹುಡುಕುವ
ಮುನ್ನ ಜೀವನೋತ್ಸಾಹಿಯಾಗಿ ಬಿಡು
ಬಸವನ ಅರ್ಥೈಸಿಕೊಳ್ಳುವ ಮುನ್ನ
ನೀನೇ ಬಸವಣ್ಣನಾಗಿ ಬಿಡು

ಸುಧಾ ಪಾಟೀಲ್

5 thoughts on “ಸುಧಾ ಪಾಟೀಲ್ ಕವಿತೆ-ಆಗಿಬಿಡು

  1. ಶರಣರ ಆಶಯವನ್ನು ಹೊತ್ತು ತಂದ ಕವಿತೆ ಧನ್ಯವಾದಗಳು ಮೇಡಂ

  2. ಕವನ ಮೆಚ್ಚಿದ ಎಲ್ಲ ಕವಿಮನಸುಗಳಿಗೆ ಧನ್ಯವಾದಗಳು

    ಸುಶಿ

Leave a Reply

Back To Top