ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ

ಮರೆತು ಬಿಡು ನೀನು

ಕುಹಕದಿ ನುಡಿದ ನುಡಿಗಳನು
ವ್ಯಂಗ್ಯದಾ ನೋಟವನು
ತಿರಸ್ಕಾರದ ಕ್ಷಣವನು
ಮರೆತು ಬಿಡು ನೀನು

ನೀ ಸೋತಾಗ ನಕ್ಕವರ
ಮರುಕವಾ ತೋರದವರ
ಬಿದ್ದಾಗ ತುಳಿದವರ
ಮರೆತು ಬಿಡು ನೀನು

ಕುಟಕಿದವರ ಮಾತಿಗೆ ಕಲ್ಲಾಗು
ಅಪಮಾನಿಸಿದರೆ ಕಿವುಡಾಗು
ತಿಳಿಗೇಡಿ ಗಳಿಂದ ದೂರಗು
ಮರೆತು ಬಿಡು ನೀನು

ನಿನ್ನಾಸೆಯ ತಿಳಿಯದವರ
ಅಂತರಂಗವ ಅರಿಯದವರ
ಅಭಿಮಾನವ ಪಡದವರ
ಮರೆತು ಬಿಡು ನೀನು

ಸಾಧನೆಯ ಸಹಿಸದವರ
ಕಾಲು ಎಳೆದು ಹೋಗುವವರ
ಬೆನ್ನಿಗೆ ಚೂರಿ ಹಾಕುವವರ
ಮರೆತು ಬಿಡು ನೀನು

ಮನದೊಳಗೆ ನೀ ಮಗುವಾಗು
ಜಗದೊಳಗೆ ನೀ ಸಿರಿಯಾಗು
ನೊಂದವರಿಗೆ ನೀ ಕಣ್ಣಾಗು
ಎಲ್ಲ ಮರೆತು ಹಾಯಾಗಿ ನೀನಿರು


ಪ್ರಭಾ ಅಶೋಕ ಪಾಟೀಲ

About The Author

1 thought on “ಪ್ರಭಾ ಅಶೋಕ ಪಾಟೀಲ-ಮರೆತು ಬಿಡು ನೀನು”

Leave a Reply

You cannot copy content of this page

Scroll to Top