ಕಾವ್ಯ ಸಂಗಾತಿ
ಬಾಗೇಪಲ್ಲಿಯವರ ಕವಿತೆ
ಗಜಲ್
ಜುಲ್ ಕಾಪಿಯಾ
ಹೇಳಲು ಏನೊಂದೂ ಇರಲಿಲ್ಲ ಬರೆಯದಾದೆ
ಹೊಸತೇನೂ ನಡೆಯಲಿಲ್ಲ ನುಡಿಯದಾದೆ
ಸಾಲೊಂದು ಮೂಡಿ ಕೊನೆಗದು ಗಪದ್ಯವಾಯ್ತು
ಕವಿಯೊಬ್ಬರಿಗೆ ಏಕೋ ಹಿಡಿಸಲಿಲ್ಲ ತಿಳಿಯದಾದೆ
ಚೆಲುವೆಯೊಬ್ಬಳು ಮೆಚ್ಚಿ ತಿಳಿಸಿದಳು ಅದನೆ ನನಗೆ
ಕವಿತೆವಸ್ತು ತಾನೆಂದು ಆಕೆ ಅರಿಯಲಿಲ್ಲ ತಿಳಿಸದಾದೆ
ಕವಿತೆ ತಳಹದಿ ತೆಲಗಿನ ಒಂದು ಪ್ರಸಿದ್ಧ ಕಾವ್ಯದ್ದಾಗಿತ್ತು
ಅನುಸರಿಸ ಎನಗೆ ಮನ ಒಪ್ಪಲಿಲ್ಲ ಸುಮ್ಮನಿರದಾದೆ
ಕೃಷ್ಣಾ! ಲೋಕೋ ಭಿನ್ನ ರುಚಿಃ ಎಂಬುದಿದೆ ಗಾದೆ
ಹಲವರು ಓದುವರೆಂದು ತಿಳಿಯಲಿಲ್ಲ ಬರೆಯದಾದೆ.
( ಬರೆದ ಮಾರನೆಯ ದಿನ ಕವಿತೆ ಓದಿದ ಹಿರಿಯ ಪಂಡಿತರೋರ್ವರು ‘ಸಹಜ ಕವಿ “ಎಂದು ಹೊಗಳಿದರು, ಹಾಗಾಗಿ ನಾಲ್ಕನೇ ದ್ವಿಪದಿ ಕೆಳಗಿನ ಸಾಲುಗಳ ಸೇರಿಸುತಿರುವೆ)
ಪಂಡಿತರೊಬ್ಬರು ಓದಿ ಎನ್ನ
^ಸಹಜ ಕವಿ^ ನೀನೆಂದರು
ಏನೂ ಅರ್ಥಕೆ ದಕ್ಕಲಿಲ್ಲ ಖಷಿಪಡದಿರದಾದೆ.
ಬಾಗೇಪಲ್ಲಿ
ಸುಂದರ ಗಜಲ್