ಡಾ ಅನ್ನಪೂರ್ಣಾ ಹಿರೇಮಠ ಕವಿತೆ ಆ ಒಂದು ಮಾತು

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ಆ ಒಂದು ಮಾತು

ನೀ ಆಡಿದ ಆ ಒಂದು ಮಾತು
ನೂರು ಬಾಣದಿಂದ ಎದೆಗೆ ಇರಿದಂತಾಯ್ತು
ಮುಚ್ಚು ಬೀಸಿ ಕೊಚ್ಚಿದಂತಾಯ್ತು
ಗುಂಡೆಟು ತಾಕಿ ಎದೆ ಸೀಳಿದಂತಾಯ್ತು
ಹೇಗೆ ಹೇಳಲಿ ಜೀವಕಾದ ನೋವು
ಅದೇಗೆ ತಿಳಿಸಲಿ ಹೃದಯಕಾದ ಗಾಯ//

ಪ್ರೀತಿ ಎಂಬುದೊಂದು ಮಾಯೆಯೇ
ಹೆಣೆದು ಹೊಸೆದು ಇಟ್ಟಂತ ಬಲೆಯೇ
ಉಕ್ಕಿಸಿ ಉಕ್ಕಿಸಿ ದುಃಖದಲೆಯಾ
ನುಡಿಸಿ ನುಡಿಸಿ ವಿರಹವನೇ ಮಿಡಿಸಿ
ಸಾವಿರ ತಂತಿಯ ದೇಹ ವೀಣೆಯಲಿ//

ಎದೆಯ ಗೂಡು ಕತ್ತರಿಸಿ ಚೆಲ್ಲಿ
ಪ್ರೇಮಸೇತುವೆ ಹರಿದೊಗೆದು
ನೆನಪಿನಾಳಕೆ ಮುತ್ತಿಗೆ ಹಾಕಿ ಕೆದಕಿ
ಬರಸಿಡಿಲು ಬಡಿದಂತೆ ಒಡಲು ಚಿದ್ರಮಾಡಿ
ಭರವಸೆಯ ಬಗೆದು ನೆಮ್ಮದಿ ಕುಟ್ಟಿ ಕದಡಿದೆಯಾ//

ಕಾಳ್ಗಿಚ್ಚು ಕಣ್ಣೋಟಕೆ ಹಚ್ಚಿ
ಪಿಸುಮಾತಿಗೆ ಇಟ್ಟೆ ಉರಿವ ಕೊಳ್ಳಿ
ಭಾವದಲೆಯ ಬರಗುಡಿಸಿ ಕೆಡಿಸಿ
ಮೋಸದುಡಿಗಿ ತೊಡಿಸಿ ಮರುಗಿಸಿ
ಶೋಕಗೀತೆಯನೇ ನುಡಿಸಿ ನುಡಿಸಿ ಮಾರ್ಧನಿಸಿ//

ನನ್ನ ಮಾಡಿಬಿಟ್ಟೆ ನೀ ಹುಚ್ಚ ಕೊಡಿ
ಜೀವ ಬಿಡದೆ ಕಾಡಿ ಕಾಡಿ ಕಂಗೆಡಿಸಿ ಒಡಲ
ಕಾದ ಶಬರಿಗಾಗಲಿಲ್ಲ ಇಂಥ ನೋವು
ಬೆಂಕಿಗಾರಿದ ಸೀತೆಗಾಗಲಿಲ್ಲ ಇಂಥ ದುಃಖ
ನೀಡಿದೆಯಲ್ಲ ನೀ ಬರಿ ಬೇವು ಬೇವು//

ಡಾ ಅನ್ನಪೂರ್ಣಾ ಹಿರೇಮಠ

One thought on “ಡಾ ಅನ್ನಪೂರ್ಣಾ ಹಿರೇಮಠ ಕವಿತೆ ಆ ಒಂದು ಮಾತು

  1. ಹೌದು ರೀ ಪ್ರೀತಿ ಎಂದರೇ ಹಾಗೆ… ಯಾರಿಗೂ ಕೇಳಲ್ಲಾ ಯಾರ ಹಂಗಲ್ಲೂ ಇಲ್ಲಾ… ಭಿತಿಯಂತೂ ಮೊದಲೇ ಇಲ್ಲಾ.ಬಿದಿಗೆಚಂದ್ರ✒️

Leave a Reply

Back To Top