ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹುಟ್ಟು ಸಾವಿನ ನಡುವೆ..
ಹುಟ್ಟನ್ನು ಯಾರೂ ಕೇಳಿ ಪಡೆಯುವುದಿಲ್ಲ
ಸಾವನ್ನ ಯಾರೂ ಬಯಸುವುದಿಲ್ಲ
ಭೂಮಿಗೆ ಯಾರು ಹೇಳಿ ಬರುವುದಿಲ್ಲ
ಹೋಗುವಾಗ ಯಾರು ಹೇಳಿ ಹೋಗುವುದಿಲ್ಲ ಸಾವು ಕರೆದಾಗ ಹೋಗುತ್ತಿರಬೇಕಷ್ಟೇ ಇರುವಷ್ಟು ಕ್ಷಣ ಚೆನ್ನಾಗಿ ಬದುಕಿ ಬಿಡಿ
ಪ್ರೀತಿಯಿಂದ ಎಲ್ಲರೂ ಅಪ್ಪಿ ಮುದ್ದಾಡಿಬಿಡಿ
ಎಲ್ಲರ ಜೊತೆ ನಕ್ಕು ನಲಿದುಬಿಡಿ
ಕೊಡಬೇಕು ಎನಿಸಿದ್ದನ್ನ ಕೊಟ್ಟು ಖುಷಿಪಡಿ
ಕಣ್ಣೀರ ಒರೆಸಿ ನೋವನ್ನು ಮರೆಸಿಬಿಡಿ
ಬದುಕನ್ನ ಸಂಭ್ರಮಿಸಿ
ಮಸ್ತಿ ಕುಸ್ತಿಯಿಂದ ದೂರ ಇದ್ದುಬಿಡಿ
ಮನದ ಒಳ್ಳೆಯ ಮಾತುಗಳನ್ನು ಆಡಿಬಿಡಿ ಹೊಟ್ಟೆ ಕಿಚ್ಚನ್ನು ಮರೆತುಬಿಡಿ
ತಪ್ಪುಗಳ ಒಪ್ಪಿ ಕ್ಷಮಿಸಿಬಿಡಿ
ನೋವುಗಳ ನುಂಗಿ ಒಲವ ತೋರಿಬಿಡಿ
ಅಪರಿಚಿತರ ನಡುವೆಯೂ ಪರಿಚಿತರಂತೆ ಇದ್ದುಬಿಡಿ
ಕೊಟ್ಟದ್ದು ಮರೆತು ಪಡೆದದ್ದು ನೆನೆಸಿ ಇರುವಾಗಲೇ ಹೊಟ್ಟೆ ತುಂಬ ಊಟ ಹಾಕಿ ಮೈತುಂಬ ಬಟ್ಟೆ ತೊಡಿಸಿ ಗೌರವಿಸಿಬಿಡಿ
ಬದುಕಿನ ಆಚೆಯೂ ನೆನಪಾಗಿ ಉಳಿದುಬಿಡಿ
ಹುಟ್ಟು ಸಾವಿನ ಸಾಫಲ್ಯತೆಯ ಪಡೆದುಬಿಡಿ
ಗೌರವಯುತವಾದ ಅಂತಿಮ ವಿಧಾಯ ಪಡೆದುಬಿಡಿ
ಸಾಗಿ ಹೋದ ದಾರಿಗೆ ಬೆಳಕಾಗಿ ಇದ್ದುಬಿಡಿ
ನಾಗರಾಜ ಜಿ. ಎನ್. ಬಾಡ
ಉಸಿರು ಆರಾಧನೆಯಾದರೆ ಹುಟ್ಟು ಸಾವಿಗೆ ಎರಡಕ್ಕೂ ಧನ್ಯತೆ. ಬುವಿಯೊಳಗೆ ನಮ್ಮ ಉಸಿರಷ್ಟೇ ನಮ್ಮ ಸ್ವಂತದ್ದು ಎನ್ನುವ ಅಂತರಾಳದ ಸತ್ಯವನ್ನು ತೆರೆದು ತೋರಿಸುವುದು ಈ ಕವನದ ಸಾಲುಗಳು. ಮನುಷ್ಯ ಮನುಷ್ಯನೊಟ್ಟಿಗೆ ಬದುಕುವ ಬದುಕಿಸುವ ಭರವಸೆ ಅವನ ಮಾತುಗಳು, ಆತ್ಮೀಯತೆ, ಪ್ರೀತಿ,ಸ್ನೇಹ, ಅನುಕಂಪ ಮತ್ತು ಸಂವೇದನೆ. ಇದ್ದಾಗ ಆಡಿದ ಮಾತು ಜೀವಂತವಾಗಿ ಉಳಿದು ಬಿಡುತ್ತದೆ. ಅಲ್ಲಿ ಎಲ್ಲವೂ ಇರುತ್ತದೆ ಒಂದು ಸಹಜತೆಯಾಗಿ. ನಶ್ವರದ ಕಾಯಕ್ಕೆ ದಿನ ಹೊಸ ಹೊಸ ಸಂಗತಿ ಸಂತೋಷ ಸಿಗುತ್ತಲೇ ಹೋಗುತ್ತದೆ. ಪುಟ್ಟ ಪುಟ್ಟ ಸಂತೋಷಗಳಲ್ಲಿ ಕಳೆದುಹೋಗಬೇಕಾದ ತನ್ಮಯತೆ ಮಾತ್ರ ನಮ್ಮದಾಗಬೇಕು…………. ಚೆನ್ನಾಗಿದೆ ಕವನದ ಅಂತರ್ಯ…….