ಕಾವ್ಯ ಸಂಗಾತಿ
ಬಾಗೇಪಲ್ಲಿ-
ಹೂವಿನೊಡನೆ ಮೂಕ ಸಂವಾದ
ಅನಾಮಿಕ ಹೂ ನೋಡಿದಾಗ ಹೊಮ್ಮಿದ ಭಾವ, ಚಂಚಲ ಕವಿ ಮನಸ್ಸು ತನ್ನ ತಪ್ಪನರಿತ ಭಾವ.
ತೆಲುಗಿನ ಸಾಹಿತ್ಯದಲ್ಲಿ ಪ್ರಸಿದ್ಧ “ಪುಷ್ಪಾ ವಿಲಾಪಂ” ಎಂಬ ಕೃತಿ ಇದೆ
ಹೂ ಕೀಳಲು ಹೋದಾಗ ಆ ಪುಷ್ಪ ಕೀಳುವವನಿಗೆ ತನ್ನ ಕತೆ ಹೇಳಿ ವಿಲಪಿಸುತ್ತದೆ.
ಆ ತಳಹದಿಯಲಿ ನಾನು ಪುಷ್ಪ ದೊಂದಿಗೆ ಸಂವಾದಿಸಿರುವೆ. ಟ್ಯಾಗೋರ್ ಅವರು ಬರೆಯುವ ಗಪದ್ಯ ಶೈಲಿಯೂ ಇದೆ. ತಮಗೆ ಹಿಡಿಸದಿದ್ದರೆ ಮನ್ನಿಸಿ ನನ್ನ ಮಿತಿ ಇಷ್ಟೇ. ನೀವು ಮೆಚ್ಚುವ ಕವಿತೆ ಬರೆಯುವ ಸಾಮರ್ಥ್ಯ ಕ್ಕೆ ಯತ್ನಿಸುವೆ.ತಮ್ಮ ಅನಿಸಿಕೆ ಹಂಚಿಕೊಂಡದ್ದಕ್ಕೆ ಧನ್ಯವಾದ.
ಎಲೈ ಕಳ್ಳಲೌಡಿ
ಯಾರ ಹೇಳಿದ್ದು ನಿನಗೆ ನನ್ನ ಹೆಸರ
ಬಾಗೇಪಲ್ಲಿ ಎಂದು ಕರೆದೆಯಲ್ಲಾ
ಕಿಸಕ್ಕನೆ ನಗುವೆಬೇರೆ
ಎಷ್ಟು ಚಂದವಿದ್ದೀಯೇ!
ದಿನಾ ಬರುವೆ ನಾ ನಿಲ್ಲಿ
ಕಂಡಿಲ್ಲವಲ್ಲಾ ನಿನ್ನ
ದಿಟವಾಗಿ ಐಶ್ವರ್ಯ ರೈ
ಅಂದಕಿಂತ ನೀ ಕಡಿಮೆ ಏನಿಲ್ಲ
“ಇನ್ನು ಪೊರ್ಲು ಪೊರ್ಲೇ ಪೊರ್ಲು”
ಆಯ್ತು ಏನು ಕರೆದದ್ದು
ಆತೀ ಕ್ಯಾ ಖಂಡಾಲ
ಗೂಮೇಂಗೆ ನಾಚೇಂಗೆ ಐಷ್ ಕರೇಂಗೆ
ಏನಂದೆ
” ಹೋಗಿ ಅಂಕಲ್ ನಿಮ್ದೆಲ್ಲಾ ತಮಾಷೆ” ಅಂದ್ಯಾ
ಆಯ್ತು ಹೇಳು
ಈ ಅಂಕಲ್ ಮುಂದೆ ನೀನೇಕೆ ಟ್ವಿಂಕಲಿಸಿದ್ದು
ಏನು
ನಿತ್ಯವೂ ನಾನಿಲ್ಲಿ ಬರುವಾಗ
ಸೆರಗು ಸರಿಸಿ ಮೈ ಡೊಂಕಿಸಿ ನೀ ನಿಂತರೂ ನಾ ನೋಡಲಿಲ್ಲವೇ
ಸಾರಿ
ನಿನಗಿಂತ ಹೆಚ್ಚು ಝಲಕ್ ತೋರಿದವರ ನೋಡ ಹೋಗಿರಬಹುದು
ಅಯ್ತು ಮಾರಾಯ್ತೀ ಹೇಳು
ಡಿವಿಜಿ ಯವರು ಹೇಳಿದ
“ಕಾನನನದಿ ಮಲ್ಲಿಗೆಯು ಮೌನದಿಂ ಬಿರಿದಂತೆ ಬಿರಿಯುವವರಲ್ಲಿ ನೀನೊ ಒಬ್ಬಳೇ”
ನಾನು ಸೋಗು ಹಾಕುವ ಕವಿ ಮಾತ್ರವೇ
ಸಾರಿ ಕಣೋ, ತಪ್ಪಾಯಿತು
ಹೌದು ನಾನು ನಿನ್ನ ಗಮನಿಸಬೇಕಿತ್ತು
ಏನೆಲ್ಲಾ ಗಮನಿಸುವ ನಾನು
ನಿನ್ನಂತರಾಳವ ಅರಿಯಬೇಕಿತ್ತು
ರವಿ ಕಾಣದ್ದು ಕವಿ ಕಂಡ
ಎಂಬ ಅಂಶದಿ ಸೋತೆ
ಎಚ್ಚರಿಸಿ ನೀನು
ನಿನ್ನ ಮುಂದೆ ಎನ್ನ ಕುಬ್ಜನಾಗಿಸಿದೆ
ಧನ್ಯವಾದ.
ಲೌಡಿ ; ಪ್ರೀತಿಯ ಮುದ್ದಾದ
ಬೈಗುಳವಾಗಿ
ಬಳಸಿದೆ
ಪೊರ್ಲು; ಸೌಂದರ್ಯ (ತುಳು)
ಝಲಕ್ ; ತಟ್ಟನೆ ಬಂದು ಹೋದ ಪ್ರಕಾಶ
ಬಾಗೇಪಲ್ಲಿ