ಕಾವ್ಯ ಸಂಗಾತಿ
ಗೊರೂರು ಜಮುನ
ಕವಿತೆ
ಗಝಲ್
ಅರಿಯದೆ ಉಲಿದ ನುಡಿಗೆ ಮೌನದ ಮುಷ್ಕರ ಹೂಡುವೆಯ ಗೆಳೆಯ
ಕರೆಯದೆ ಬಂದೆನೆಂದು ಬೇಸರದ ನೋಟ ಬೀರುವೆಯಾ ಗೆಳೆಯ
ದೀರ್ಘಕಾಲದ ಪ್ರೀತಿಯನು ಹೀಗೆ ಮೊಟುಕು*ಗೊಳಿಸಲು ಸಾಧ್ಯವೇ
ಮನವ ಕದಡುತ ಹುಸಿಯ ಮುನಿಸನು ತೋರುವೆಯಾ ಗೆಳೆಯ
ನೂರು ಯೋಚನೆ ಗಳನು ಹೊತ್ತು ಬಾಳ ಪಯಣದ ನಿರೀಕ್ಷೆಯಲ್ಲಿರುವೆ
ಸಹನೆಯಲಿ ಚಿಂತಿಸುತ ಅಂತರಂಗದ ಮಾತು ಕೇಳುವೆಯಾ ಗೆಳೆಯ
ಬಾನು ಭಾಸ್ಕರರ ಸಂಬಂಧದಂತೆ ಇರುವುದು ನಮ್ಮಿಬ್ಬರ ಬಂಧ ಒಂದನ್ನೊಂದು ಅಗಲಿ ಬದುಕಲಾರವು ಎಂಬುವುದ ಸಾರುವೇಯಾ ಗೆಳೆಯ
ಏನೇ ಬಂದರೂ ಕೈಯ ಬಿಡೆನೆಂದು ಮಾತು ಕೊಟ್ಟಿದ್ದೆ ಜಮುನಾಳಿಗೆ
ಘಟಿಸಿದ ಕಹಿಯ ಘಟನೆಯ ಗಾಳಿಗೆ ತೂರುವೆಯಾ ಗೆಳೆಯ
ಗೊರೂರು ಜಮುನ