ಕಾವ್ಯ ಸಂಗಾತಿ
ಬಡಿಗೇರ ಮೌನೇಶ್
ಅಮ್ಮನೊಲುಮೆ
ಅಮ್ಮಾ…ನಿನ್ನೊಲುಮೆ
ಬತ್ತದ ಚಿಲುಮೆ
ಬತ್ತಬಹುದು
ನದಿ ಸರೋವರಗಳು
ಬದಲಾಗಬಹುದು
ಸೂರ್ಯಚಂದ್ರರ ಸ್ಥಿತ್ಯಂತರಗಳು
ಅಳಿಯಬಹುದು
ಗಿರಿ ಶಿಖರ ತರುಗಳು
ಬತ್ತುವುದಿಲ್ಲ ತಾಯೀ
ಸದಾ ಉಕ್ಕಿ ಹರಿವುದು
ನಿನ್ನ ಪ್ರೇಮಾಮೃತ
ಬದಲಾಗುವುದಿಲ್ಲ
ಎಂದೂ… ನಿನ್ನೊಳಗಿನ
ನಿಸ್ಪೃಹ,ನಿಷ್ಕಪಟ ಮಮತೆ
ಅಳಿಯುವುದಿಲ್ಲ ನಿನ್ನರ್ತಿ
ಉಳಿಯುವುದು
ಆ ಚಂದ್ರಾರ್ಕ ಪರ್ಯಂತ
ತನ್ನೊಡಲೊಳಡಗಿದ
ಭಯಂಕರ ಜ್ವಾಲಾಮುಖಿಯಿಂದ
ಅಗಾಧ ಶಿಲೆಗಳೂ
ನೆಲಸಮವಾಗುವವು
ಕಡಲುಗಳೂ ಕೆರಳುವವು ಒಮ್ಮೊಮ್ಮೆ
ನಿನ್ನಂತರಂಗದ ನಿರ್ಮೋಹ
ಪ್ರೇಮಧಾರೆಯಿಂದ
ಮನಸುಗಳು ಅರಳುವವು
ಎಂದೆಂದೂ….
ಬಡಿಗೇರ ಮೌನೇಶ್
Very good one