ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಕಾವ್ಯಾಭಿನಂದನೆ

ಪ್ರೇಮ ಪಾರಿಜಾತ ಹೂ ಹಾಸ ಹಾಸಿ
ಕವನ ದವನ ಸುಮನ ಘಮವ ಸೂಸಿ
ಕನಸುಗಳೇ ಹೀಗೆ ನ್ನುತ ದೂರಿ
ಸೂರ್ಯನೇಕೆ ಮುಳುಗಿದ? ನೆಂದು ಹಲುಬಿ
ಕ್ರಾಂತಿ ಸೂರ್ಯ ಬಸವನರಸುತ ಸಾಗಿದ ತರುಣ…

ಅಪ್ಪನ ಹೆಗಲ ಮೇಲೆ ಹತ್ತಿ ಕುಳಿತ
ಗುಬ್ಬಿ ಹೇಳಿದ ಕಥೆ ಯ  ಕೇಳುತ
ಸದ್ದಿಲ್ಲದೆ ಎದ್ದು ಹೋದೆ ಅವ್ವನೆನುತ
ನೊಂದ ಹೃದಯ ಮೃದು ಭಾವ ಜೀವ
ನುಡಿದ ಶರಣ ಹಿಡಿದು ನಡೆದ ವಚನ ಸಾಹಿತ್ಯ ಕರಣ…

ಗಾಂಧಿಗೊಂದು ಪತ್ರ ಬರೆದು
ಇಂಕೀಲಾಬ್ ಘೋಷಣೆ ಗೈದ
ದೇಶ ಪ್ರೇಮಿಗಳ ನೆನೆದು ನಮಿಸಿದ
ನಾಡ ನುಡಿ ಗುಡಿ ಕಟ್ಟಿದವರ
ಮತ್ತೆ ಮರಳಿ ಬನ್ನಿ ಎಂದು ಕರೆದು
ಕವಿ ಕನಸುಗಾರ ಕಟ್ಟಿದ ಕವನ ಹೂವ ತೋರಣ

ಭ್ರೂಣ ಬರೆದ ಕವಿತೆ ಯಳಲ ಬಿಚ್ಚಿ
ಸಿಹಿಯಾಯಿತು ಕಡಲಿಂದು ಎಂದು
ಸ್ನೇಹ ಪ್ರೀತಿ ರಾಶಿಯಲ್ಲಿ ಮಿಂದು ನಿಂದು
ಸಕಲ ಜೀವರಾಶಿ ಒಡಲ ಭಾವ ಬಂಧು
ನಕ್ಕುನಲಿವ ಕವಿಜೀವಕಿಂದು ಶರಣು ಶರಣೆಂಬೆ ಶರಣ…

ಬೇಲಿ ಮೇಲಿನ ಹೂವಿಗೊಂದು
ನೋವ ನಲಿವ ಸಿಹಿ ಕಹಿಯ
ಭಾವಬಿತ್ತಿ ನೆನಪ ಬುತ್ತಿ ಸವಿ ತುತ್ತನುಣಿಸಿ
ನೀನು ಮೌನವಾಗುವ ಮುನ್ನ
ಬೆಳಕ ಬಟ್ಟೆ ಕಳಚಿನಿಂದ ರಾತ್ರಿಯ
ಕಡು ಕತ್ತಲಕಳೆವ ಕಂದೀಲಾಗುವೆನೆಂದ  
ಮನಮಲ್ಲಿಗೆಗಳ ಹರಣಗೈದ ಕವಿ ಹೃದಯ ಕರುಣ.. ..

ಮಾತಿನಿಂದ ಮೌನಕ್ಕೆ ಜಾರಿ ಹೋದ
ಕಾವ್ಯದಾಗಸದಿ ತೂರಿ ಬಂದ ಶಶಿ ಕಿರಣ..
ನಿಮ್ಮನರಸಿ ಬಂದ ಬಸವ ಶಾಂತಿ ಅರುಣ…
ವಂದನೆ.. ಅಭಿನಂದನೆ.. ಕಾವ್ಯಾಭಿನಂದನೆ..
ಸಮತೆ ಮಮತೆ ಸಹನೆ ವರುಣ….
ಕಲಿಯುಗದ ಬಸವ ಕಿರಣ  ಸ್ಫುರಣ…..

————————————————–

ಇಂದಿರಾ ಮೋಟೆಬೆನ್ನೂರ.

About The Author

3 thoughts on “ಇಂದಿರಾ ಮೋಟೆಬೆನ್ನೂರ ಕವಿತೆ ಕಾವ್ಯಾಭಿನಂದನೆ”

Leave a Reply

You cannot copy content of this page

Scroll to Top