ಪೂರ್ಣಿಮ ಯಲಿಗಾರ-ಭಾವೈಕ್ಯತೆಯ ಬೀಡು

ಕಾವ್ಯ ಸಂಗಾತಿ

ಪೂರ್ಣಿಮ ಯಲಿಗಾರ

ಭಾವೈಕ್ಯತೆಯ ಬೀಡು

ಕರುನಾಡು ಇದು ಕೆಚ್ಚೆದೆಯ ಬೀಡು
ಭಾಷೆಯಲಿ ತುಂಬಿದೆ ನವಿರಾದ ಸೊಗಡು
ಭವ್ಯ ಚರಿತ್ರೆಯ ತೆರೆದೊಮ್ಮೆ ನೋಡು
ಶರಣಾಗುತ ತಾಯಿಗೆ ನಮನವ ಮಾಡು

ಕರ್ನಾಟಕ ಸುವರ್ಣ ಸಂಭ್ರಮ ಮನೋಹರ
ಕನ್ನಡ ಸೊಗಡಿನ ವಿದ್ವತ್ ಪ್ರಹಾರ
ಹಳದಿ ಕೆಂಪು ಬಣ್ಣದ ಬಾವುಟದ ಸಾಕಾರ
ಸರ್ವರಲಿ ಭಾಷಾಭಿಮಾನದ ಭಾವೋದ್ವೇಗದ ಜೈಕಾರ

ಭಾವೈಕ್ಯತೆಯ ಬೆಳಕು ಕರ್ನಾಟಕದಿ ಮೊಳಗಿದೆ
ಪ್ರೀತಿ ವಾತ್ಸಲ್ಯಕ್ಕೆ ಹೂತೋರಣ ಕಟ್ಟಿದೆ
ಭದ್ರ ಬಾಂಧವ್ಯಕ್ಕೆ ಇದುವೇ ಬುನಾದಿಯಾಗಿದೆ
ಭುವನೇಶ್ವರಿಯ ಜಯಘೋಷ ಮುಗಿಲು ಮುಟ್ಟಿದೆ

ಸಾಹಿತ್ಯ ಲೋಕದ ದಿಗ್ಗಜರ ಕಂಡಿಹುದು
ಕವಿ ಕೋಗಿಲೆಗಳಿಗೆ ಜನ್ಮ ನೀಡಿಹುದು
ದಿವ್ಯ ಸಂಸ್ಕೃತಿಯ ಜಗಕೆ ಸಾರಿಹುದು
ಕರುನಾಡಿನ ಶಕ್ತಿಯದು ಗಗನದಿ ರಾರಾಜಿಸಿಹುದು


ಪೂರ್ಣಿಮ ಯಲಿಗಾರ

Leave a Reply

Back To Top