ದುಡಿಯುವ ಮಹಿಳೆಯ ದುಮ್ಮಾನಗಳು ಡಾ. ಮೀನಾಕ್ಷಿ ಪಾಟೀಲ್ ಕಲ್ಯಾಣಿ

ವಿಶೇಷ ಲೇಖನ

ದುಡಿಯುವ ಮಹಿಳೆಯ ದುಮ್ಮಾನಗಳು

ಡಾ. ಮೀನಾಕ್ಷಿ ಪಾಟೀಲ್ ಕಲ್ಯಾಣಿ

“ಸಾರಿಗೆ ಸಂಸ್ಥೆಯ ನಿರ್ವಾಹಕಿ ಒಬ್ಬರು ಹೇಳುವಂತೆ ಲೋಕಲ್ ಡ್ಯೂಟಿ (ನಗರ ಸಾರಿಗೆ )ಮಾಡುವಾಗ ವಿಶ್ರಾಂತಿ ವೇಳೆಯಲ್ಲಿ ಮಗುವಿಗೆ ಎದೆ ಹಾಲು ಉಣಿಸಿ ಪುನಃ ಆ ದಿನದ ಕರ್ತವ್ಯದ ಮೇಲೆ ತೆರಳುತ್ತೇನೆ……” ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಗೃಹ ಕೃತ್ಯಗಳನ್ನೆಲ್ಲ ನಿರ್ವಹಿಸಿಕೊಂಡು ಮನೆಯ ಸ್ವಾಸ್ಥ ಕಾಪಾಡಿಕೊಂಡು ಹೋಗುವುದು ಒಂದೆಡೆ ಸ್ತ್ರೀಯ ಕೆಲಸವಾಗಿ, ಇನ್ನೊಂದೆಡೆ ಹೊರಗೆ ದುಡಿದು, ಆ ಮನೆಯ ಆರ್ಥಿಕ ಜವಾಬ್ದಾರಿಯನ್ನ ನಿಭಾಯಿಸುವುದು ಪುರುಷನದಾಗಿತ್ತು. ಇಂಥ ಶಿಷ್ಟ ಸಂಪ್ರದಾಯದ ಕುಟುಂಬದಲ್ಲಿ  ಹೆಣ್ಣು ಮನೆಯ ಆಚೆ ಹೋಗಿ ದುಡಿಯುವುದೆಂದರೆ ಅಷ್ಟಾಗಿ ಸಮ್ಮತ ಸಿಗುತ್ತಿರಲಿಲ್ಲ.ಆದರೆ ಕಾಲ ಬದಲಾದಂತೆ ಆಧುನಿಕತೆಯ ಪ್ರಭಾವದಿಂದಾಗಿ ಸ್ವತಹ ನವೀನತೆಗೆ ಒಳಗಾಗಿ ಉತ್ತಮ ಜೀವನ ಶೈಲಿಯ ಆಕರ್ಷಣೆಯಿಂದಾಗಿ ಹೊರ ಉದ್ಯೋಗವನ್ನು ಹುಡುಕಿಕೊಳ್ಳುವುದನ್ನು ಆಕೆ ಹೆಚ್ಚು ಇಷ್ಟಪಡುತ್ತಿದ್ದಾಳೆ.ಯಾವುದೇ ಕ್ಷೇತ್ರವಾದರೂ ಸರಿ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲೆಯೆನ್ನುವ
 ಆತ್ಮವಿಶ್ವಾಸ ಅವಳಲ್ಲಿ ಮೂಡಿದೆ. ಆದರೆ ಈ ವಿಚಾರಕ್ಕೆ ವ್ಯತಿರಿಕ್ತವಾಗಿ ಕೆಲವು ಸಂದರ್ಭ ಸನ್ನಿವೇಶಗಳು ಕೆಲವು ಸಲ ಅವಳಿಗೆ ಪೂರಕವಾಗದೆ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಮಹಿಳೆ ಒತ್ತಡಕ್ಕೆ ಒಳಗಾಗುತ್ತಾಳೆ. ಅದೇನಿದ್ದರೂ ಆಫೀಸು ಮತ್ತು ಕುಟುಂಬ ಎರಡನ್ನು ಸಮದೋಗಿಸಿಕೊಂಡು ಹೋಗುವ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಇಂದಿನ ಮಹಿಳೆ ಗಳಿಸಿಕೊಂಡಿದ್ದಾಳೆ. ಇದೆಲ್ಲವನ್ನು ಗಮನಿಸಿದಾಗ ಕುಟುಂಬ ನಿರ್ವಹಣೆ ಕಠಿಣ ವೆನಿಸುತ್ತದೆ. ಕಚೇರಿ ಕೆಲಸವಾದರೆ ಅದಕ್ಕೊಂದು ನಿರ್ದಿಷ್ಟ ಸಮಯ ಎಂಬುದು ಇರುತ್ತದೆ. ಆದರೆ ಮನೆ ಕೆಲಸ ಹಾಗಲ್ಲ, ಅದಕ್ಕೆ ವೇಳೆಯ ಇತಿಮಿತಿ ಇಲ್ಲ .ದಿನಪೂರ್ತಿ ಯಾವ ಯಾವ ಕೆಲಸ ಹೇಗೆ ಎಂತ ಸಂದರ್ಭಗಳಲ್ಲಿ ಎದುರಾಗುತ್ತದೆ ಅವಳಿಗೆ ಗೊತ್ತಿರುವುದಿಲ್ಲ. ಕಚೇರಿಗೆ ಹೊರಡುವ ಸಮಯದಲ್ಲಿ ಅತಿಥಿಗಳು ಬಂದರಂತೂ ಇಬ್ಬಂದಿತನದ ಗೊಂದಲಕ್ಕೀಡಾಗುತ್ತಾಳೆ. ಕೆಲವೊಮ್ಮೆ ಸಂಬಂಧಿಗಳ ಟೀಕೆಯನ್ನು ಎದುರಿಸಬೇಕಾಗುತ್ತದೆ. ಕಾರ್ಯ ಬಾಹುಳ್ಯದ ಒ ತ್ತಡಕ್ಕೆ ಸಿಲುಕಿ ಮನೋದೈಹಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾಳೆ. ಮಧ್ಯಮ ವರ್ಗದವರ ಇಂದಿನ ನ್ಯೂಕ್ಲಿಯರ್ ಫ್ಯಾಮಿಲಿ( ಚಿಕ್ಕ ಕುಟುಂಬ) ಗಳಲ್ಲಂತೂಏಕಕಾಲಕ್ಕೆ ಕುಟುಂಬ ಮತ್ತು ಸಾರ್ವಜನಿಕ ಸೇವೆಗಳನ್ನು (ಸರಕಾರಿ ,ಅರ್ಜೆಸರ್ಕಾರಿ ,ಖಾಸಗಿ ದಿನಗೂಲಿ , ಇತ್ಯಾದಿ )  ಸಮರ್ಥವಾಗಿ ನಿಭಾಯಿಸುವಲ್ಲಿ ಹತ್ತು ಹಲವು ತೊಂದರೆಗಳನ್ನ ಅವಳು ಎದುರಿಸಬೇಕಾಗುತ್ತದೆ.
                  ಆಧುನಿಕತೆ ಮತ್ತು ಕಾಲದ ಬದಲಾವಣೆಗೆ ಹೊಂದಿಕೊಳ್ಳಬೇಕೆಂಬ ಬದುಕಿನ ಸೂತ್ರವೇನೋ ಸರಿ . ಆದರೆ ಪಶ್ಚಿಮ ರಾಷ್ಟ್ರಗಳ ಜೀವನ ಶೈಲಿಯ ಅನುಕರಣೆ ಕೂಡ ಅಷ್ಟೇ ತೊಂದರೆದಾಯಕ ವೆನಿಸುತ್ತದೆ .ಆ ರಾಷ್ಟ್ರಗಳಲ್ಲಿ ಕೌಟುಂಬಿಕ ಬದ್ಧತೆ ಕಟ್ಟುಪಾಡುಗಳ ನಿಯಮಗಳಿಲ್ಲ “ವ್ಯಕ್ತಿಗೊಂದು ಉದ್ಯೋಗ”  ವೆಂಬ ಉದ್ಯೋಗಕ್ಕೆ ಪ್ರಾಶಸ್ತ್ಯ ನೀಡುವ ಅವರು ಕುಟುಂಬ ಪ್ರಾಧಾನ್ಯವಿಲ್ಲದೆ ಪಾಲಿಸುವ ಸೂತ್ರ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆಹೆಚ್ಚಿನ ಪ್ರಾಧಾನ್ಯತೆ ಇದೆ. ಒಂದು ಕುಟುಂಬದ ಸರ್ವತೋಮುಖ ಅಭಿವೃದ್ಧಿ ಸ್ತ್ರೀಯನ್ನು ಅವಲಂಬಿಸಿದೆ ಎಂದು ಹೇಳಿದರು ತಪ್ಪಾಗಲಿಕ್ಕಿಲ್ಲ. ಸ್ತ್ರೀ ಎಂದರೆ ಪರಿಪೂರ್ಣತೆ. ಅತ್ತ ಸಮಯಕ್ಕೆ ಸರಿಯಾಗಿ ದಕ್ಷತೆಯಿಂದ ಕಚೇರಿ ಕೆಲಸವನ್ನು ಇತ್ತ ಕುಟುಂಬ ಕಾರ್ಯವನ್ನು ನೆರವೇರಿಸಬೇಕು. ಕಚೇರಿಯಲ್ಲಿ ಅಧಿಕಾರಿಯಾಗಿ ಮನೆಯಲ್ಲಿ ಮನೆ ವಾಳ್ತೆಯಾಗಿ ವಿಭಿನ್ನ ಪಾತ್ರಕ್ಕೆ ಜೀವ ತುಂಬಬೇಕು. ಇವುಗಳ ಮಧ್ಯೆ ಕೆಲವೊಮ್ಮೆ ಟೀಕೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸ್ತ್ರೀ ಎಂದರೆ ಒಂದು ಪರಿವಾರ , ಒಂದು ಸಮೂಹ, ಒಂದು ಸಂಸ್ಕೃತಿ, ಸಮಷ್ಠಿ ಭಾವ, ಬದುಕಿನ ಒಂದು ಪರಿಪೂರ್ಣತೆ. . ಇನ್ನೊಂದು ಅರ್ಥದಲ್ಲಿ Collectivism feel ಎಂದರೆ ಮಹಿಳಾ ಅಸ್ಮಿತೆ ಎಂದು ಹೇಳಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ದುಡಿಮೆಯ ಶ್ರಮ ಸಾರ್ಥಕವೆನಿಸುತ್ತಿದೆ. ಅದರಲ್ಲೂ ಕೃಷಿ ಕ್ಷೇತ್ರ ಮತ್ತು ಉತ್ಪಾದನಾ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರ ಶ್ರಮ ಅತ್ಯಂತ ಹೆಚ್ಚಾಗಿದೆ. ಕೃಷಿ ಕ್ಷೇತ್ರದಲ್ಲಿ ಶೇಕಡ 69 ರಷ್ಟು ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ . ಉದ್ಯಮ ಕ್ಷೇತ್ರದಲ್ಲಿ ಶೇಕಡ 50ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ದೇಶದ ಆರ್ಥಿಕ ಕ್ಷೇತ್ರದಲ್ಲಿ ಮಹಿಳೆಯರ ದುಡಿಮೆಯ ಪಾಲು ಸಾಕಷ್ಟಿದೆ .ಆದರೆ ಕುಟುಂಬ ಮಟ್ಟದಲ್ಲಿ ಅವಳ ದುಡಿಮೆಗೆಯಾವುದೇಗೌರವವಿಲ್ಲದಾಗಿದೆ..ಕುಟುಂಬದಲ್ಲಿ ಎಲ್ಲ ಸದಸ್ಯರ ಸಹಮತದೊಂದಿಗೆ ಪ್ರೋತ್ಸಾಹ ದೊಂದಿಗೆ ಕೆಲಸ ಮಾಡಲು ಅವಳಿಗೆ ಆಗುತ್ತಿಲ್ಲ .ಹೀಗಾಗಿಅನೇಕಸಂದರ್ಭಗಳಲ್ಲಿಅವಳುಕಷ್ಟ-ಕೋಟಲೆಗಳನ್ನ ಎದುರಿಸಬೇಕಾಗುತ್ತದೆ.
ವಿಭಕ್ತ ಕುಟುಂಬದಲ್ಲಿ ಹೆರಿಗೆ ಮಗುವಿನ ಪಾಲನೆ ಪೋಷಣೆ ಇತ್ಯಾದಿ…. ಹಾಲುಣಿಸುವ ಅವಧಿಯ ಕಂದಮಗಳಿದ್ದರೆ ಸಂಪೂರ್ಣ ತಾಯಿತನವನ್ನು ಅವುಗಳಿಗೆ ನೀಡದೇ ಹೋಗುವುದು
ಪೊಲೀಸು ಸಾರ್ವಜನಿಕ ಸೇವೆಯ ವಾಹನ ಚಾಲಕಿ ಅಥವಾ ನಿರ್ವಾಹಕಿ….. ಉದ್ಯೋಗಗಳಿಂದ ಇಂಥ ಅನಾನುಕೂಲಗಳು ಇನ್ನೂ ಹೆಚ್ಚು.
ಕೌಟುಂಬಿಕ ಕಲಹಗಳು , ದಾಂಪತ್ಯ ವಿರಸಗಳು ಕೆಲವೊಮ್ಮೆ ತಲೆದೋರುತ್ತವೆ ಗಂಡ ಹೆಂಡತಿಯರಲ್ಲಿ ಹೊಂದಾಣಿಕೆಯ ಕೊರತೆ ಇದ್ದಾಗ ಕುಟುಂಬ ಸದಸ್ಯರ ಸಹಕಾರ ಬೆಂಬಲ ಇಲ್ಲದಿದ್ದಾಗ ಅವಳಿಗೆ ಹೊರಗಿನ ಕೆಲಸ ಹೊರೆಯಾಗಿ ಬಿಡುತ್ತದೆ.
ಇನ್ನು ಅಪ್ಪಟ ಗ್ರಹಿಣಿಯ ವಿಷಯ ಬಂದಾಗಲೂ ಅಷ್ಟೇ ಹೌಸ್ ವೈಫ್ ಎಂದರೆ ಮನೆ ಕೆಲಸದವಳು ಎಂಬುದೇ ಎಲ್ಲರ ಭಾವನೆ.” ನಿನ್ನದೇನಿದೆ ಕೆಲಸ ಇಡೀ ದಿನ ಮನೆಯಲ್ಲಿ ಇರ್ತಿಯ ನನ್ನ ಹಾಗೆ ನೀನೇನು ಹೊರಗೆದುಡಿಯಲುಹೋಗುತ್ತೀಯಾ”…….. ಎಂಬಂತ ಕೇಳಿರಿಮೆಯ ಮಾತುಗಳು ಅವಳ ಮನಸ್ಸಿಗೆ ಘಾಸಿ ಉಂಟು ಮಾಡುತ್ತವೆ. ಓರ್ವ ಆದರ್ಶ ಗ್ರಹಿಣಿಯಾಗಿ ಎಲ್ಲವನ್ನು ತೂಗಿಸಿಕೊಂಡು ಹೋಗುವ ಅವಳ ಫುಲ್ ಟೈಮ್ ವರ್ಕ್ ಅವಳಿಗೇ ಗೊತ್ತು.
ಒಂದು ಕುಟುಂಬದ ಒಟ್ಟು ಸ್ವಾಸ್ಥ್ಯ ಆದರ್ಶ ತಾಯಿ ಹೆಂಡತಿಯ ಮೇಲೆ ನಿಂತಿರುವುದು ನಿಜ. ಇಂಥ ತಿಳುವಳಿಕೆ ಹೊಂದಾಣಿಕೆಗಳು ಇದ್ದಾಗ ಮನೆಯ ಆಚೆಗಿನ ದುಡಿಮೆಯು ಸಹ ನೆಮ್ಮದಿ ತಂದು ಕೊಡಲು ಸಾಧ್ಯವಿದೆ. ” ಮಹಿಳಾ ಚಾಲೆಂಜ್” ಅನ್ನುವ ರೀತಿಯಲ್ಲಿ ಅವಳು ಮುಂದೆ ಸಾಗುತ್ತಿದ್ದಾಳೆ. ಇದು ಅವಳ ಮನೋಸ್ಥೈರ್ಯ. ಅವಳ ಅಸ್ಮಿತೆಗೆ ಒಂದು ಹ್ಯಾಟ್ಸಾಫ್.


-ಡಾ. ಮೀನಾಕ್ಷಿ ಪಾಟೀಲ್ ಕಲ್ಯಾಣಿ

Leave a Reply

Back To Top