ವಾಣಿ ಭಂಡಾರಿ ಗಜಲ್

ಕಾವ್ಯ ಸಂಗಾತಿ

ವಾಣಿ ಭಂಡಾರಿ

ಗಜಲ್

ಅದೆಷ್ಟು ಕಪ್ಪೆಗಳು ವಟಗುಡುತಿವೆ ಕಾಲವಲ್ಲದ ಕಾಲದಲ್ಲಿ.
ಅದೆಷ್ಟು ನರಿಗಳು ಬೊಳ್ಳಿಕ್ಕುತಿವೆ ಕಾಡೇ ಅಲ್ಲದ ನಾಡಿನಲ್ಲಿ.

ಎಂತ ಸಮಯ ಬಂತಯ್ಯನೆರೆ ಕೂದಲಿಗೂ ಯೌವ್ವನ ಬಿರಿದ ಮನಕೆ ರೋದನೆ
ಅದೆಷ್ಟು ಮೊಸಳೆಗಳು ಕಣ್ಣೀರಿಡುತಿವೆ ನೀರೇ ಇರದ ನೆಲದಲ್ಲಿ.

ಅಗಸೆ ಬಾಗಿಲಿನ ಸಿಂಗಾರ ದ್ವಾರ ಬಾಗಿಲಿನಂದ ಕಳೆಗುಂದಿಸಿದೆ
ಅದೆಷ್ಟು ಹಾವುಗಳು ಬುಸುಗುಡುತಿವೆ ತನ್ನದಲ್ಲದ ಹುತ್ತದಲ್ಲಿ.

ತುತ್ತನ್ನಕ್ಕೂ ಕಣ್ಣೀರೇ ಸಾರಥಿಯಾದ ಮೇಲೆ ತತ್ರಾಣಿಯ ಕನಸಿಗೇನು ಬೆಲೆ
ಅದೆಷ್ಟು ಚೇಳುಗಳು ಕುಟುಕುತಿವೆ ಬಾಲವಿರದ ಹಲ್ಲಿನಲ್ಲಿ.

ಕಾಲಧರ್ಮಕ್ಕೂ ಮೀರಿದ ಸತ್ಯವೊಂದಿದೆ ವಾಣಿ ಬಣ್ಣದ ಮುಖವಾಡ ಕಳಚುವುದು
ಅದೆಷ್ಟು ಮನಸುಗಳು ನೋಯುತಿವೆ ತಪ್ಪಿರದ ಜೀವದಲ್ಲಿ.


ವಾಣಿ ಭಂಡಾರಿ

Leave a Reply

Back To Top