ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಮೊದಲ ವೈದ್ಯೆ ಆನಂದಿಬಾಯಿ ಜೋಶಿ
ಆನಂದಿಬಾಯಿ ಜೋಶಿ ಮಾರ್ಚ 31. 1865ರಲ್ಲಿ ಮದ್ಯಮ ವರ್ಗದ ಬ್ರಾಹ್ಮಣ
ಕುಟುಂಬದಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣನಲ್ಲ್ಲಿ ಜನಿಸಿದರು. ಇವರ
ಹುಟ್ಟು ಹೆಸರು ಯಮುನಾ. ಈಕೆಯ ಪೋಷಕರು ಕಲ್ಯಾಣನಲ್ಲಿ
ಭೂಮಾಲೀಕರಾಗಿದ್ದರು. ಆದರೆ ಆರ್ಥಿಕವಾಗಿ ನಷ್ಟಕ್ಕೆ ಗುರಿಯಾದರು.
ಆನಂದಿಯವರು 9ನೇ ವಯಸ್ಸಿಗೆ ಗೋಪಾಲ್ ರಾವ್ ಜೋಶಿ ಅವರ ಜೊತೆ
ಹಸೆಮಣೆ ಏರಿದ್ದರು. ಗೋಪಾಲರಾವ್ ಅವರು ಆನಂದಿಗಿಂತ 20 ವರ್ಷ
ವಯಸ್ಸಿನಲ್ಲಿ ದೊಡ್ಡವರು. ಮದುವೆಯ ಬಳಿಕ ಯಮುನಾ ಹೆಸರನ್ನು
ಆನಂದಿ ಎಂಬುದಾಗಿ ಬದಲಾಯಿಸಿದರು. ಗೋಪಾಲ್ ರಾವ್ ಅವರು ಕಲ್ಯಾಣ್ ಅಂಚೆ
ಕಛೇರಿಯಲ್ಲಿ ಕ್ಲರ್ಕ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆನಂದಿಬಾಯಿ 14ನೇ
ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ ಸರಿಯಾದ ಚಿಕಿತ್ಸೆ
ದೊರೆಯದೆ ಮಗು ಕೇವಲ 10 ದಿನಗಳ ಕಾಲ ಮಾತ್ರ ಬದುಕಿತ್ತು. ಈ
ಘಟನೆಯೇ ಆನಂದಿಬಾಯಿ ಜೀವನದ ಪ್ರಮುಖ ತಿರುವಿಗೆ ಕಾರಣವಾಯಿತು. ಆಗ
ಆನಂದಿಬಾಯಿ ತಾನು ವೈದ್ಯಯಾಗಬೇಕು ಎಂಬ ಕನಸನ್ನು ಕಾಣುತ್ತಾರೆ. ಇವರ
ಕನಸನ್ನು ನನಸು ಮಾಡಲು ಗೋಪಾಲ್‍ರಾವ್ ಅವರು ಪ್ರೋತ್ಸಾಹಿಸುತ್ತಾರೆ.
ಗೋಪಾರಾವ್ ಅವರು 1880ರಲ್ಲಿ ಅಮೇರಿಕಾದ ಮಿಷನರಿಗೆ ಪತ್ರವನ್ನು
ಬರೆಯುವರು. ಆನಂದಿಬಾಯಿಯವರು ವಿದೇಶಕ್ಕೆ ಹೋಗಿ ಶಿಕ್ಷಣವನ್ನು
ಪಡೆಯುವುದು ಬ್ರಾಹ್ಮಣ ಸಮಾಜದವರಿಗೆ ಇಷ್ಟವಿಲ್ಲದ ಕಾರಣ ಅವರ ಶಿಕ್ಷಣ
ಪಡೆಯುವುದಕ್ಕೆ ವಿರೋಧವನ್ನು ವ್ಯಕ್ತಪಡಿಸಿದರು. ಆದರೆ
ಗೋಪಾಲರಾವ್ ಅವರ ಪ್ರೋತ್ಸಾಹ, ಬೆಂಬಲ ಆನಂದಿಬಾಯಿಯವರ ಆತ್ಮವಿಶ್ವಾಸ
ಹೆಚ್ಚಿಸಿತು. ಪತಿಯ ಬೆಂಬಲದಿಂದ 1883ರಲ್ಲಿ ಅಮೇರಿಕಾಕ್ಕೆ ತೆರಳಿದರು.
ಅಮೇರಿಕಾದ ಡ್ರೆಕ್ಸೆಲ್ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ
ಪ್ರವೇಶವನ್ನು ಪಡೆದರು. ಆನಂದಿಬಾಯಿ ಅವರು ಯಾವಾಗಲೂ ನಿಶಕ್ತಿ,
ತಲೆನೋವು, ಶೀತ, ಜ್ವರದಿಂದ ಬಳಲುತ್ತಿದ್ದರು. ಆದರೂ ಹೆಚ್ಚು
ಆರೋಗ್ಯದ ಕಡೆಗೆ ಗಮನ ಕೂಡದೇ ಓದಿನತ್ತ ಗಮನ
ಹರಿಸುತ್ತಿದ್ದರು. ಎಲ್ಲಾ ಕಷ್ಟಗಳ ನಡುವೆ 1886ರಲ್ಲಿ ವೈದ್ಯಕೀಯ
ಪದವಿಯನ್ನು ಪಡೆದರು. ಇವರ ಸಾಧನೆಯನ್ನು ರಾಣಿ ವಿಕ್ಟೋರಿಯ
ಕೂಡ ಹೊಗಳಿದರು. ವೈದ್ಯಕೀಯ ಪದವಿ ಪಡೆದು ಭಾರತಕ್ಕೆ ಬಂದಾಗ
ಅದ್ದೂರಿಯಾಗಿ ಸ್ವಾಗತಿಸಿದರು. ಇವರನ್ನು ಕೊಲ್ಹಾಪುರದ ಆರ್.ಸಿ. ಎಸ್.ಎಮ್
ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಿ.ಪಿ.ಆರ್ ಆಸ್ಪತ್ರೆಯ ಮಹಿಳಾ
ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.
ಕೋಲ್ಹಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯ ಮಹಿಳಾ ವಾರ್ಡ್‍ನ
ಮೇಲ್ವಿಚಾರಣೆಯನ್ನು ವಹಿಸಿಕೊಂಡರು. ದುರಾದೃಷ್ಟವಶಾತ
ಆನಂದಿಬಾಯಿಯವರು ತಮ್ಮ 22ನೇ (1887 ಫೇಬ್ರವರಿ, 26 ರಂದು ನಿಧನ)
ವಯಸ್ಸಿನಲ್ಲಯೇ ಅನಾರೋಗ್ಯದ ಹಿನ್ನಲೆಯಲ್ಲಿ ಕೊನೆಯುಸಿರೆಳಿದರು.
ಆನಂದಿಬಾಯಿಯವರು ವೈದೈಕೀಯ ಪದವಿ ಪಡೆದ ಮೊಟ್ಟ ಮೊದಲ
ಮಹಿಳೆಯಾಗಿದ್ದಾರೆ.
– ಡಾ.ಸುರೇಖಾ ರಾಠೋಡ
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ