ಕಾವ್ಯಯಾನ
ಗಜಲ್
ಅಮೃತಾ ಉಮೇಶ್ ಶೆಟ್ಟಿ

ಪಾಪದ ಪಿಂಡವೆಂದು ಅರಿತು ದಾರಿಲಿ ಬಿಟ್ಟಿದ್ದು ಸರಿಯೇ
ಶಾಪದ ಕೂಸಿನ ಕರದಲಿ ಭಿಕ್ಷೆಪಾತ್ರೆ ಕೊಟ್ಟಿದ್ದು ಸರಿಯೇ
ಕಂಡವರ ಮುಂದೆ ಅಂಗಲಾಚಿ ಬದುಕುವ ಕಷ್ಟ ಗೊತ್ತೇನು
ಉಂಡವನ ಬಳಿ ಹಸಿವಿನ ಪ್ರದರ್ಶನ ಅಟ್ಟಿದ್ದು ಸರಿಯೇ
ದಿನ ಅಲೆದೂ ಉದರ ತುಂಬುವಷ್ಟು ಸಿಗದೇ ಹೋಯಿತು
ಮನ ಅನಾಥನೆಂಬ ಬರೆಯಲ್ಲಿ ನಿತ್ಯ ಸುಟ್ಟಿದ್ದು ಸರಿಯೇ
ಮಾಡದ ತಪ್ಪಿಗೆ ಬೇಡುವ ಜೀವನದ ಶಿಕ್ಷೆಯೇ ಹೇಳು
ನೋಡದ ನಾಳೆಗೆ ಕಮರಿದ ಕನಸನು ಇಟ್ಟಿದ್ದು ಸರಿಯೇ
ತಿರುಕನ ನಡೆಗೆ ತಿರುವು ಬರಲೆಂದು ಅಮ್ಮಿಯ ಆಶಯ
ಹರಕು ಅರಿವೆಯಲಿ ಬಣ್ಣದ ಆಸೆಯ ನೆಟ್ಟಿದ್ದು ಸರಿಯೇ
ವ್ಹಾ….
ಅದ್ಭುತ ಪ್ರಶ್ನೆಗಳನ್ನು ಹೃದಯಕ್ಕೆ ಎಸೆಯುವ ಸಾಲುಗಳು, ಅಮೃತಾಜೀ ಧನ್ಯವಾದ.
Super