ಗಜಲ್

ಗಜಲ್

ದೇವರಾಜ್ ಹುಣಸಿಕಟ್ಟಿ

ಅಮೃತ ವಿಷವಾಗಿದ್ದು ಗೊತ್ತೇಯಾಗಲಿಲ್ಲ
ಪ್ರೀತಿ ದ್ವೇಷವಾಗಿದ್ದು ಗೊತ್ತೇಯಾಗಲಿಲ್ಲ

ನೀರು ನೆರಳಿಗೆ ಕೊಳ್ಳಿ ಇಟ್ಟು ಉಳಿಸಿ ಕೊಳ್ಳುವ ಧರ್ಮ ಯಾವುದು…? ಗೆಳೆಯ
ಗಂಗಾಳದ ತುತ್ತು ಅಂಗಳಕೆ ಚೆಲ್ಲಿದ್ದು ಗೊತ್ತೇಯಾಗಲಿಲ್ಲ

ಅದೆಷ್ಟು ಮುಖವಾಡಗಳು ಮತದ ಪೆಟ್ಟಿಗೆಗೆ ಗೊತ್ತೇ.?
ಬಟ್ಟೆ ಬಿಚ್ಚಿಸಿ ಬೆತ್ತಲುಗೊಳಿಸಿದ್ದು ಗೊತ್ತೇಯಾಗಲಿಲ್ಲ

ಧರ್ಮದ ದೊಂಬಿಯಲಿ ಸುಟ್ಟ ಮನ ಮನೆಗಳ ಲೆಕ್ಕ ಉಂಟೇ..?
ಹಣದ ತೈಲಿಗೆ ಹೆಣ ಉರುಳಿದ್ದು ಗೊತ್ತೇಯಾಗಲಿಲ್ಲ

ಸತ್ತೆಗೆ ಅನಂತ ಆರದ ಕುರುಡಂತೆ ಗೊತ್ತೇ ದೇವಾ
ಪ್ರಾರ್ಥಿಸುವ ಕೊರಳ ಕತ್ತರಿಸಿದ್ದು ಗೊತ್ತೇಯಾಗಲಿಲ್ಲ


Leave a Reply

Back To Top