ಗಜಲ್

ಗಜಲ್

ದೇವರಾಜ್ ಹುಣಸಿಕಟ್ಟಿ

ಮುಡಿಯಲೇ ಬೇಕೆಂದೇನೂ ಇಲ್ಲಾ ಗುಲಾಬಿಯ ಹನಿ ನೆತ್ತರನ್ನಾದರೂ ಮೀಸಲಿಡು ಒಲವೇ
ಪ್ರೀತಿಸ ಬೇಕೆಂದೇನೂ ಇಲ್ಲಾ ಒಂದಿರುಳಿನ ಸಿಹಿ ಕನಸನ್ನಾ ದರೂ ಮೀಸಲಿಡು ಒಲವೇ

ಸದ್ದಿಲ್ಲದೇ ಸತ್ತ ಮಜನೂಗಳ ಲೆಕ್ಕ ಇಟ್ಟವರುಂಟೆ ಜಗದಲ್ಲಿ…?ಗೆಳೆಯ
ಗುಣವಾಗದ ಖಾಯಿಲೆಗೆ ಔಷಧಿ ಬೇಕೆಂದೇನೂ ಇಲ್ಲಾ ಹನಿವಿರಹವನ್ನಾದರೂ ಮೀಸಲಿಡು ಒಲವೇ

ಮೊನ್ನೆ ಮೊನ್ನೆ ವರೆಗೂ ಸಾವಿಗೆ ಅಂಜುತಿದ್ದವ ನಾನು ಗೊತ್ತೇ ನಿನಗೆ…?
ದ್ವೇಷಿಸಬೇಕೆಂದೇನೂ ಇಲ್ಲಾ ಕಹಿವಿಷವನ್ನಾದರೂ ಮೀಸಲಿಡು ಒಲವೇ

ಹುಸಿ ನಗೆಯೊಂದಿಗೆ ಸತ್ತು ಬದುಕುವುದು ರೂಢಿಯಲ್ಲವೇ ಪ್ರೇಮಿಗೆ…?
ಪ್ರತಿ ಪ್ರೀತಿ ಇತಿಹಾಸ ಬರೆಯ ಬೇಕೆಂದೇನೂ ಇಲ್ಲಾ ಹೃದಯದಕೆ ಹನಿ ನೆನಪನ್ನಾದರೂ ಮೀಸಲಿಡು ಒಲವೇ

ನಿನ್ನ ಮೌನದ ಧಗೆ ಏನೇನು ಸುಟ್ಟಿತೆಂದು ಕೇಳಬೇಡ ಲೆಕ್ಕ ಕಷ್ಟವಾದೀತು…?
ದೇವನ ಗೋರಿಗೆ ಬೆಳಕೇ ಬೇಕೆಂದೇನೂ ಇಲ್ಲಾ ಹನಿ ಕಿರುನಗೆಯನ್ನಾದರೂ ಮೀಸಲಿಡು ಒಲವೇ


Leave a Reply

Back To Top