ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚಂದಿರ

ಮಾಳಿಂಗ ಹಾದಿಮನಿ ಗಂಗನಾಳ

ಚೂರು ಜಾರುತಿದೆ
ಮುಂಗುರುಳು

ಬೇಕೆಂದೆ
ಕೆಂಪಾಗಿ ಕೆನ್ನೆಯು

ಮರಳಿ ಮರಳಿ ನೋಟ
ಬೀರುತಿದೆ ನಿನ್ನೆಡೆಗೆ

ಸಂಜೆಯು ರಂಗಾಗಿ
ಬೆರಳು ತಡಕಾಡುತಿದೆ

ಇರುಳಿಗೆ ನಿದಿರೆಯಿಲ್ಲ
ಕನಸ ಅಪ್ಪುಗೆಗೆ

ಬಂದಾರೆ ಬಂದುಬೀಡು
ಈ ಬೀದಿಯಲಿ

ಬೆಳದಿಂಗಳು ಚೆಲ್ಲಲಿ
ಮೈಮನಗಳಲಿ


About The Author

Leave a Reply

You cannot copy content of this page

Scroll to Top