ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮುತ್ತು

ಅನಸೂಯ ಜಹಗೀರದಾರ

.

ಗಾಳಿಯಲಿ ಹಾರುವ ಮುಂಗುರುಳು
ಮೊಗವ ಸವರಿ ಮುತ್ತಿಡುತ್ತದೆ
ಬಿಡದೆ ನಡೆದ ಜಲಧಿಯ ಅಲೆಯು
ಮರಳ ತಟಕೆ ಮುತ್ತಿಡುತ್ತದೆ

ಮಳೆಯ ಹನಿಯೂ
ಸೂರ್ಯ ರಶ್ಮಿಯೂ
ಕಾಲ ಕಾಲಕೂ ಮುತ್ತಿಡುತ್ತಲೇ ಇದೆ
ಆ ಮುತ್ತುಗಳೆಲ್ಲ
ಒರತೆಯಾಗುತ್ತದೆ
ನೆಲ ನಭದ ಬೆಳಕಾಗುತ್ತದೆ

ಎಲೆಯ ಮೇಲೆ ಹೊಳೆವ
ಬಿಂದು ಬಿಂದು ಸೇರಿ ಸೇರಿ
ಮಣಿಸರವಾಗುತ್ತದೆ
ಏಳು ಬಣ್ಣಗಳಲಿ ಮಿಂದೇಳುತ್ತದೆ

ಮರದ ತಂಪು
ಸೊಂಪು ಒಂದುಗೂಡಿ
ಹಸಿರಾಗುತ್ತದೆ ಉಸಿರಾಗುತ್ತದೆ

ಶ್ಯಾಮ ಹಿತ್ತಲಲಿ ಬಿತ್ತಿದ
ಮುತ್ತಿನ ಬೀಜ
ಹೆಮ್ಮರವಾಗಿ
ರಾಧೆಯ ಕಾಡಿ ಗೋಪಿಕೆಯರ ಬೇಡಿ
ಒಡಲಾಗುತ್ತದೆ ಮಡಿಲಾಗುತ್ತದೆ
ತೆನೆ ತೆನೆಗೂ ಎಣಿಕೆ ಆತೀತ
ಮುತ್ತರಾಶಿ..

ನಿನ್ನೊಡಲ ಕಡಲಲಿ ಮಡಗಿದ
ಎದೆಯ ಚಿಪ್ಪಿನಲಿ ಅಡಗಿದ
ಮುತ್ತರಾಶಿಯೂ.. ಆತೀತವೇ ನಲ್ಲ..,

ಅಕ್ಕರದ ಪದಪದವೂ
ಒಂದೊಂದು ನುಡಿಯೂ
ಅಕ್ಕರೆಯ ಮುತ್ತರಾಶಿ

ಕಳೆದ ಹೊತ್ತಿನ ಮುತ್ತುಗಳ
ಹುಡುಕೆಂದು ಹೇಳುವ ನೀನೂ…
ಸುಮ್ಮನಿರುವ ನಾನೂ
ಹೇಳಲಾರೆವು ಏನನ್ನೂ..

ಶೋಧನೆ ನಿರಂತರವೇ..

ಒಂದಂತೂ ಸತ್ಯ‌…
ಮುತ್ತು ಮುತ್ತೇ..!!


About The Author

1 thought on “ಮುತ್ತು”

Leave a Reply

You cannot copy content of this page

Scroll to Top