ಕಾವ್ಯ ಸಂಗಾತಿ
ಅಂತ:ಕರಣ
ಸುಲಭಾ ಜೋಶಿ ಹಾವನೂರ.
ಒಬ್ಬ ಮನುಷ್ಯ
ಒಂದು ವೃಕ್ಷ ದಂತೆ
ಬೇರುಗಳ ಹೆಜ್ಜೆ
ಟೊoಗೆಗಳ ಹರಹು
ನವಿರೆಷ್ಟು ನಡೆದಷ್ಟು
ಒಬ್ಬ ಮನುಷ್ಯ
ಒಂದು ವೃಕ್ಷ.
ಆಕಾಂಕ್ಷಾ ಪಕ್ಷಿ
ಅಂತರಗದ, ಅಂತರಾಳದ ಅಕ್ಷಿ
ದೂರವೆಷ್ಟು ಏರಿದಷ್ಟು.
ಒಬ್ಬ ಮನುಷ್ಯ
ಒಂದು ವೃಕ್ಷ
ಆನಂದ ಪವನ
ಸುಂದರ ಸಂವಹನ
ತಲೆದೂಗಿದಂತೆ
ಎಲೆಗಳೆಲ್ಲಾ ಟೊoಗೆಸಹಿತ.
ಇದಕ್ಯಾಕೆ ಬೇಕು
ಸಮೀಕರಣ? ಸಾಕು
ಅರ್ತತೆ, ಅಂತ:ಕರಣ.
ಒಬ್ಬ ಮನುಷ್ಯ
ಒಂದು ವೃಕ್ಷ.