ಬೆಳಗಿಸಿ

ಕಾವ್ಯಸಂಗಾತಿ

ಬೆಳಗಿಸಿ

ಸುಲಭಾ ಜೋಶಿ  ಹಾವನೂರ.

ಹೂವು ಅರಳುತ್ತಲಿರುವಾಗ
ಸುವಾಸನೆಯ ಅಲೆ
ತೆಲುತ್ತಲಿರುವಾಗ
ಬೆಳಗಿನ ಕಂಚಿನ ಕಂಠದ
ಸ್ವರವ್ಯಾಪ್ತಿ ಆಲಾಪವನು ತನ್ಮಯಿಸಿದೆ
ಸೂರ್ಯಕಿರಣವನ್ನು
ಸ್ವಲ್ಪ ಅಂಗ್ಯಯಲ್ಲಿ ಹಿಡಿದು ಸೇವಿಸಬೇಕೆಂದೆ
ಭಾವಿಸಬೇಕೆಂದೆ.
ಕನಸು ಕಳೆದುಕೊಳ್ಳುತ್ತಿರುವ
ಭಾವ ಬರಿದಾಗುತ್ತಿರುವ
ಲೈಕುಕಾಮೆಂಟು ಶೇರು ಫೋಟೋಗಳ ಸುರಿಮಳೆಏನಕೇನ ಪ್ರಕಾರೇಣ ಧಾವತಿಯೋ
ಧಾವತಿ. ನಕ್ಕರೆ ಅತ್ತರೆ
ನಿಂತರೆ ಕೂತರೆ ಪ್ರದರ್ಶನ.j
ಎಷ್ಟು ಹೊತ್ತು ಇದೇ ಮಾತು ಇವತ್ತು ಇದೇ
ಜಗತ್ತು.
ಧುತ್ತನೆ ಬಿತ್ತು ತದೇಕ ಚಿತ್ತ ಅತ್ತಇತ್ತ
ನನ್ನದೇ ಪ್ರಸ್ಸನ್ನ ಲೋಕ
ವ್ಯಾಪಿಸುವತ್ತ
ನಿತ್ಯ ಮನದೇಳೆ ಬತ್ತಿಗಳ
ಬೆಳಗಿನೊಂದಿಗೆ
ಬೆಳೆಯಬೇಕೆಂದೆ.
ಮುಂದೆಮುಂದೆಯೇ
ಹೆಜ್ಜೆಇಟ್ಟೆ
ಪ್ರೀತಿಯ ಇಟ್ಟಿಗೆಗಳ
ಗಟ್ಟಿಗೊಳಿಸಿದೆ.


Leave a Reply

Back To Top