ಕಾವ್ಯಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಬಾಗೇಪಲ್ಲಿ
ಜೇನು ಸ್ಪುರಿಸುವ ಹುಣ್ಣಿಮೆ ಚಂದ್ರನಂತೆ ನೀನು ಕಣೇ
ಹಾಲ ಹೊಳೆ ಬೆಳೆದಿಂಗಳು ಹರಿಯುವಂತೆ ನೀನು ಕಣೇ
ತಿಂಗಳ ಮಾವನ ಹೊಲುವ ದುಂಡನೆ ಆಕಾರ ನಿನ್ನಮೊಗ
ನಕ್ಷತ್ರಾಧಿಪನಲಿ ಕಾಣ್ವ ಪುಟ್ಟ ಮೊಲದಂತೆ ನೀನು ಕಣೇ
ಶಶಿ ಕಿರಣದಷ್ಟೇ ಸಮಸೀತೋಷ್ಣ ನಿನ್ನ ಕಣ್ಣೋಟ
ನಿಶಾನಭಕೆ ಇಟ್ಟ ಚಂದಿರವಟ್ಟಂತೆ ನೀನು ಕಣೇ
ಜತನದಿಂದಿರು ತರುಣೀ ವೃಥಾ ನಗೆಯ ನೀ ಸೂಸಬೇಡ ಯಾರಿಗೂ
ಆದೀಯ ಶಾಪಗ್ರಸ್ಥೆ ಚೌತಿ ವಕ್ರಮನಂತೆ ನೀನು ಕಣೇ.
ಕೃಷ್ಣ ನ ಸಲಹೆ ಸದಾ ಪಾಲಿಸು ವಹಿಸಿ ಎಚ್ಚರವ
ನುಂಗಿದರೆ ರಾಹು! ಇರುವೆ ತಾರಾ ಪತಿಯಂತೆ ನೀನು ಕಣೇ.
——-
(ಚಂದಿರವಟ್ಟು: ಸಿಂಧೂರ)