ಗಜಲ್

ಗಜಲ್

ಪ್ರಭಾವತಿ ಎಸ್ ದೇಸಾಯಿ

ಕಿಚ್ಚಿಲ್ಲದೆ ಬೇಯುತಿರುವೆ ಎದೆ ಮಿಡಿತವೆ
ಇರುಳೆಲ್ಲಾ ಬಿಕ್ಕುತಿರುವೆ ಎದೆ ಮಿಡಿತವೆ

ಬರದ ಬಯಲು ಸೀಮೆಯಲ್ಲಿ ಹುಟ್ಟಿದವಳು
ಒಲವ ಬೀಜ ಬಿತ್ತುತಿರುವೆ ಎದೆ ಮಿಡಿತವೆ

ತುಂಬಿಯ ಝೆಂಕಾರ ಲೋಕ ಎಚ್ಚರಿಸಿತು
ಸುಮ ನಗುವನು ನೋಡುತಿರುವೆ ಎದೆ ಮಿಡಿತವೆ

ಮನದ ದುಗುಡ ಮರೆಯಲು ಕಾಯುವೆ ಶಶಿಯನು
ಕನಸುಗಳನು ಹಾಸುತಿರುವೆ ಎದೆ ಮಿಡಿತವೆ

ವೈಶಾಖದ ಬಿಸಿಗೆ ದಣಿದಿದೆ ತನು ಮನವು
ಅಧರ ಜೇನು ಬಯಸುತಿರುವೆ ಎದೆ ಮಿಡಿತವೆ

ಜಗ ತೊರೆದು ಅವನ ಹೃದಯ ಸೇರುವ ಆಸೆ
ಗಂಗೆಯಾಗಿ ಹರಿಯುತಿರುವೆ ಎದೆ ಮಿಡಿತವೆ

ವಸಂತಾಗಮನಕೆ ಲತೆ ಚಿಗುರಿದೆ “ಪ್ರಭೆ”
ಮಲ್ಲಿಗೆ ಘಮ ಹರಡುತಿರುವೆ ಎದೆ ಮಿಡಿತವೆ


Leave a Reply

Back To Top