ಈ ದಿನದ ಸೀರೆ ಪುರಾಣ..

ಹಾಸ್ಯ ಬರಹ

ಈ ದಿನದ ಸೀರೆ ಪುರಾಣ..

ಸಿದ್ಧರಾಮ ಹೊನ್ಕಲ್

ನಿನ್ನೆ ಕಾರ್ಯಕ್ರಮ ಒಂದನ್ನು ಮುಗಿಸಿ ಬಂದು ಅದು ಇದು ಓದಿ, ಒಂದಷ್ಟು ಸ್ಟೇಟಸ್, ವಾಟ್ಸಾಪ್ ಗೃಪ್ ಕಣ್ಣಾಡಿಸಿ ಅದೇ ತಾನೆ ರಾತ್ರಿ ಒಂದು ಗಂಟೆಗೆ ನಿನ್ನೆ ಮಗಳ ಮನೆಯಲ್ಲಿ ಮಲಗಿದ್ದೆ. ನಾಲ್ಕು ಗಂಟೆಗೆ ಎಬ್ಬಿಸಿ ಬೇಗ ತಯ್ಯಾರಾಗಿ ಅಂತ ಜೋರು ಮಾಡಿ ಹೊರಡಿಸಿದವಳು ನಮ್ಮ ಹೋಮ ಮಿನಿಸ್ಟರ್.

ಬೆಂಗಳೂರಿನಿಂದ ಚೆನೈ ಸಮೀಪದ ಕಾಂಚಿಪುರಂ ಕಾಮಾಕ್ಷಿ ದೇವಾಲಯಕ್ಕೆ ಈ ಐದು ಗಂಟೆಗೆ ಹೊರಟಾಯಿತು. ಅಯ್ಯೋ,ನೀವು ನೀವೇ ಹೋಗಿಬನ್ನಿ, ನಾ ಬೆಂಗಳೂರು ಓಡಾಡಿಕೊಂಡಿರುವೆ.. ಅಂದ್ರೆ ಕೇಳಲೇ ಇಲ್ಲ. ದೇವಾಲಯ ದರ್ಶನ ನೆಪ.ಮನೆಯ ಕಾರ್ಯಕ್ರಮ ಒಂದಕ್ಕೆ ಕಂಚಿ ಸೀರೆಗಳನು ಕಂಚಿ ಯಲೇ ಕೊಳ್ಳೋದು ಇವರ ಮೂಲ ಅಜೆಂಡಾ ಅನಿಸಿತು.ಡ್ರೈವರ ಕನಿಷ್ಠ ಐದು ಗಂಟೆಯ ಜರ್ನಿ ಇಲ್ಲಿಂದ ಅಂದಾಗಲೇ ನಾ ಕಾಮಾಕ್ಷಿಯಮ್ಮನ ಮೇಲೆ ಭಾರ ಹಾಕಿ ಮೌನವಾಗಿ ಹೋದೆ. ಎಷ್ಟೋ ಜನ ಸೀರೆ ಖರೀದಿಗೆ ಬೆಂಗಳೂರು ಬರ್ತಾರೆ.ನೀವೇನು ಇಲ್ಲಿಂದ ಅಷ್ಟು ದೂರ ಹೋಗೋದು.. ಬೇಡ ಅಂದ್ರೆ ನಮ್ಮ ಮಾತು ಕೇಳೋರಾರು.ಈ ಕಾರಿಗೆ ಹಾಕಿಸೋ ಪಿಓಎಲ್ ದಲ್ಲಿ ಅಷ್ಟು ಸೀರೆ ಕೊಳ್ಳಬಹುದು ಇಲ್ಲೇ..ಅಂದ್ರು ಕಿವಿಯಲ್ಲಿ ಹಾಕಿಕೊಳ್ಮಲಿಲ್ಲ.೧೧ ಗಂಟೆಗೆ ಕಾಂಚಿಪುರಂ ತಲುಪಿಯಾಯಿತು.

ಮಹಾ ಭಾಷಾ ದುರಾಭಿಮಾನಿಗಳಾದ ಈ ತಮಿಳಿಗರು ಹಿಂದಿ ಇಂಗ್ಲಿಷ್ ತಪ್ಪಿಯು ಆಡರು.ಅಳಿಯನ ಕಾರ ಡ್ರೈವರ ರಘು, ಸರ್, ದೇವಸ್ಥಾನ ತೋರಿಸಿ ಇಲ್ಲೆ ಗಾಡಿ ಪಾರ್ಕ್ ಮಾಡಿ ಇಲ್ಲೆ ಇರುವೆ.ನೀವು ಆಟೋದಲಿ ಮಾರ್ಕೇಟ ಹೋಗಿ.ಯಾರು ನಾವು ಕೇಳಿದ ಶಾಪಗಳ ವಿಳಾಸ ಹೇಳುತ್ತಿಲ್ಲ. ನಮಗೆ‌ ತಮಿಳುಬಾರದು ಅಂದ.ಆಯಿತು ಅಂತ ಆ ಗುಡಿಯ ರಶ್ ಹಾಗೂ ಸಾಲು ನೋಡಿ ಹೊರಗಿನಿಂದ ನಮಸ್ಕಾರ ಮಾಡಿ ಆಟೋ ಹಿಡಿದು ಮಾರ್ಕೇಟ್ ಹೋದೆವು.ಇವರಿಗೆ ಶಾಪ್ ಹೋಗೋ ಆತುರ.

   ಇವರು ಊರಿಂದ ತಂದ ವಿಳಾಸಗಳ ಶಾಪಗಳಲ್ಲಿ ಹೆಜ್ಜೆ ಇಡಲು ಆಗದಷ್ಟು ರಶ್.ಇಂದು ರವಿವಾರ ರಜೆ ಬೇರೆ. ಅದರಲ್ಲಿ ನಾಲ್ಕು ಗಂಟೆಗೆ ಇಂದು ಬಂದ ಮಾಡುವರಂತೆ. ಗಿರಾಕಿಗಳಿಗೆ ಸೀರೆ ತೋರಿಸೋದಿರಲಿ ಕೂಡಕೂ ಆಗದಷ್ಟು ರಶ್.ಅವರಿಗೆ ಒಳಗೆ‌ ಕಳಿಸಿ‌ ಹೊರಗಡೆ ಇರೋ ಚೇರಲಿ ಎಂದಿನಂತೆ ನಾ ನನ್ನ ಕೆಲಸದಲಿ ಬಿಜಿ ಆಗಿದ್ದೆ.ನಾಲ್ಕಾರು ಅಂಗಡಿ ತಿರುಗಾಡಿ ಬಂದು ಬೆಂಗಳೂರು ತಗೋಳಣರಿ. ಇಲ್ಲಿ ಕಾಸ್ಟೀ ಹಾಗೂ ಅಷ್ಟೇನು ಚೆಂದನೇಯ ಡಿಸೈನ್ ಸಿಗುತ್ತಿಲ್ಲ ಅಂದ್ಲು.

ಇವರಿಗೆ ಪೇಷನ್ಸದಿಂದ  ಗಮನಿಸಿ ತೋರಿಸೋರು ಯಾರು ಸಿಕ್ಕಿರಲಿಲ್ಲ ಅನಿಸಿತು.ಈ ಮಾತು ಮೊದಲೇ ಹೇಳಿದ್ದೆ. ಕೇಳತೀರಾ ನನ್ನ ಮಾತು.ಅಂತ ಒಳಗೊಳಗೆ ಬಯಿದುಕೊಂಡು (ಪಿ.ಓ.ಎಲ್, ಊಟ ಉಪಹಾರ, ಡ್ರೈವರ್ ಭತ್ಯೆ ಹೀಗೆ ೮-೧೦ ಸಾವಿರ ಕೈ ಬಿಟ್ಟಿದ್ದವು) ಇರಲಿ ನಡಿರಿ.ಕಾಮಾಕ್ಷಮ್ಮ ಎಲ್ಲಾದರೂ ಕೊಡುವಳು ಅಂತ ನಗಿಸಿ ಮುಖ ಚಿಕ್ಕದು ಮಾಡಿದ ಅವಳಿಗೆ ಸಮಾಧಾನಿಸಿದೆ. ಮಗಳು ಕಾವ್ಯ ಸಹ ನಾನು ಬೇಡ ಅಂದ್ರೂ ಕೇಳಲಿಲ್ಲ ಪಪ್ಪ ಈ ಮಮ್ಮಿ ಅಂದಳು. ಇರಲಿ ನಡೆಯಿರಿ.ರಾಯಚೂರು ಹೋಗಿ ಕಲ್ಲಾನೆ ನೋಡಿದರು ಅಂತ ನಮ್ಮ ಕಡೆ ಗಾದೇ ಮಾತೇ ಇದೆ.ಇದು ಹಾಗೇ ಅಂದೆ.ನೀವು ಹೋದಲೆಲ್ಲ ಸಾವಿರಾರು ರೂಪಾಯಿ ಪುಸ್ತಕ ತಂದು ವೇಷ್ಟ ಮಾಡತೀರಿ.(ಆವಳ ದೃಷ್ಟಿಯಿಂದ ಪುಸ್ತಕ ತರೋದು ವೇಷ್ಠ ಕೆಲಸ), ಚಸ್ಮಾ ಅಂಗಡಿಗೆ ಹೋದರೆ ಹತ್ತಾರು ಸಾವಿರ ಖರ್ಚು ಮಾಡಿ ಒಂದೇ ಸಲಕ್ಕೆ ೩-೪ ನಮೂನಿ ಚಸ್ಮಾ ತರ್ತೀರಿ. ಬಟ್ಟೆ ಅಂಗಡಿಗೆ ಹೋದರೆ ಅರ್ಧಡಜನ್ ಹೊಸ ಹೊಸ ಶರ್ಟ ತರ್ತೀರಿ. ಅವೇನು ಅಂಗಡಿಗಳು ಮುಂದೆ ಇರೋದೆ ಇಲ್ಲ ಅನ್ನುವಂತೆ.ಬೂಟ್ ಚಪ್ಪಲಿ ಸಹ ಸರ್ತಿಗೆ ಮೂರ್ನಾಲ್ಕು ಜೋಡು ತರ್ತೀರಿ.. ನಿಮ್ಮ ಷೋಕಿಗೆ, ನಾ ಇಷ್ಟು ದೇವರ ದರ್ಶನಕ ಬಂದು ಸೀರೆ ಖರೀದಿ ಮಾಡಲಿಲ್ಲ ಅಂತ ಸುಮ್ಮನೆ ಬಯ್ಯಬೇಡಿ ತಂದಿ ಮಗಳು ಅಂದ್ಲು.

 ಬಯ್ಯಲ್ಲ ನಡಿರಿ, ಊಟ ಮಾಡಿ ಹೋಗಮು ಆಂತ ಹೋಟೆಲ್ ಗೆ ಹೋಗಿ ಐದು ಊಟ ಹೇಳಿ ಟೋಕನ್ ಕೊಟ್ಟರೆ,ಆ ಸಪ್ಲೈಯರ್ ಚಪಾತಿ ಪೂರಿ ಏನು ಕೊಡದೇ ಒಂದೊಂದು ದೊಡ್ಡ ತಾಟಿನ ತುಂಬಾ ಬರೀ ಬಿಸಿ ಬಿಸಿಯಾದ ಅನ್ನ ಸುತ್ತಲೂ ನಾಲ್ಕಾರು ನಮೂನೆಯ ಸಾರು,ಭಾಜಿ,ಮಜ್ಜಿಗೆ,ಹಪ್ಪಳ ಹೀಗೆ ಹಲವಾರು ಬಟ್ಟಲುಗಳು ಇಟ್ಟು ಹೋದ. ರೊಟ್ಟಿ, ಚಪಾತಿ,ಪೂರಿ ಇಲ್ಲದೆ ಇಷ್ಟು ರೊಕ್ಕ‌ ಕೊಟ್ಟು ಬರೀ ಅನ್ನ ತಿನಬೇಕಾ ! ಎಂಥಲ್ಲಿ ಕರಕೊಂಡು ಬಂದ್ರೀ ಅಂತ ಡ್ರೈವರ್ ಮೇಲೆ ಸಿಟ್ಟಾದಳು.ಆತ, ಅಮ್ಮ ಇದು ತಮಿಳುನಾಡು. ಬರೀ ಅನ್ನ ಕೊಡುವರು…ಅವರು ಬರೀ ಅನ್ನನೇ ತಿನ್ನೋದು ಅಂದ. ಅನ್ನ ತುಂಬಾ ಮಲ್ಲಿಗೆ ಹೂ.. ನಂತೆ ಚೆಂದ ಘಮ ಅಂತ ಪರಿಮಳಿಸುತ್ತಾ ಇತ್ತು.ಎಲ್ಲಾ ಬಟ್ಟಲುಗಳು ಸುರುವಿಕೊಂಡು ನಾವು ತಿಂದು ಮುಗಿಸಿದೆವು. ಆವಳು ಹೊಟೇಲ್ ದವನಿಗೆ, ಇಡೀ ತಮಿಳುನಾಡವರಿಗೆ ಬಯ್ಕೊಂಡು ಉಂಡ ಶಾಸ್ತ್ರ ಮಾಡಿ ಕೈ ತೊಳೆದಳು.ಬರೀ ಅನ್ನ ಹೆಂಗರ ತಿಂತಾವೋ ಅಂತನ್ನುತ್ತಾ ಸುಮ್ಮನೇ ಇಲ್ಲಿಗೆ ಕರಕೊಂಡು ಬಂದ್ರಿ ಅಂತ ನನಗೂ ಕೆಂಗಣ್ಣು ತೆರೆದಳು. ಹಲೋ ಮೇಡಂ, ನಾವಲ್ಲ ಕರಕೊಂಡು ಬಂದದ್ದು ಇಲ್ಲಿಗೆ.. ನೀವು. ಸುಮ್ಮನೇ ನಡಿರಿ.ದಾರಿಯಲ್ಲಿ ಹೋಟೆಲ್ ಸಿಕ್ಕರೆ ಬೆಳಿಗ್ಗೆ ತಿನಿಸಿದಂತೆ ದೋಸೆ,ಇಡ್ಲಿ ವಡಾ ಏನಾರ ತಿನ್ನಿಸುವೆ ಅಂತ ಸಮಾಧಾನಿಸಿ ಕಾರು ಹತ್ತಿಸಿ ಬೆಂಗಳೂರು ಕಡೆಗೆ ಹೊರಡಿಸಿದೆ…ಎಂಬಲ್ಲಿಗೆ ಈ ಪುಟ್ಟ ಸೀರೆ ಪುರಾಣ,ಅನ್ನ ಪುರಾಣ ಮುಗಿಸುವೆ.


Leave a Reply

Back To Top