ಕಾವ್ಯ ಸಂಗಾತಿ
ಜಗದೀಶ್ ನಾಗೋಳ್
ಹೂವು ಅರಳಿ ನಲಿಯುತಿತ್ತು
ಮಂಜು ಹನಿಯ ಮುತ್ತು ಹೊತ್ತು
ರವಿಯ ಮಿಂಚು ಅದರೊಳಿತ್ತು
ನೀ ಜೊತೆಯಿರಬಾರದೆ
ನೀ ಜೊತೆಯಿರಬಾರದೆ
ಜೀವ ಭಾವ ಸೇರೊ ಹೊತ್ತು
ನದಿಯು ಕಡಲ ಸೇರುತಿತ್ತು
ಸುಳಿಯ ಸುತ್ತಿ ಹಾಡುತಿತ್ತು
ನೀ ಜೊತೆಯಿರಬಾರದೆ
ನೀ ಜೊತೆಯಿರಬಾರದೆ
ಜೋಡಿ ಹಕ್ಕಿ ಗೂಡು ಕಟ್ಟಿ
ದೂರ ಸಾಗಿ ಕಾಳು ಹೆಕ್ಕಿ
ಮರಿಗೆ ತುತ್ತು ಕೊಡುವ ಹೊತ್ತು
ನೀ ಜೊತೆಯಿರಬಾರದೆ
ನೀ ಜೊತೆಯಿರಬಾರದೆ
- ಜಗದೀಶ್ ನಾಗೋಳ್
Superb Sir