ವ್ಯಾಲಂಟೈನ್ ವಿಶೇಷ
ಅನಿತಾ.
ಅರಂಬಿಕ….
ದಿನಗಳಲಿದ್ದ ಸ್ವಾರ್ಥ ಪ್ರೀತಿ..
ಪ್ರೀತಿ ಹೆಸರಲಿ ಕಟ್ಟಿ ಹಾಕುವ ಹುನ್ನಾರ
ಹೊಗಳಿಗೆ, ತೆಗಳಿಕೆಯಲಿ ದಿನ ಕಳೆದದ್ದು
ಜೀವನದ ಒಂದು ಭಾಗ…
ದಿನ ಕಳೆದಂತೆ…
ಹೆಚ್ಚು , ಹೆಚ್ಚು ತಿಳಿದಂತೆ
ಭೇಷರತ್ತಿಯ ಗಡಿಯತ್ತ ಹೆಜ್ಜೆ ಹಾಕಿ
ತಿರುಗುವ ಗಡಿಯಾರದಂತೆ ಏಕಾತನೆ….
ಪ್ರೀತಿಸಲು, ಅಡ್ಡಿಯಾಗಲಿಲ್ಲ, ಹೊರೆಯಾಗಲಿಲ್ಲ.!
ಮುಂದಿನ ದಿನಗಳು…
ಜನುಮವೆತ್ತುತ್ತಿತ್ತು ಪ್ರೀತಿಯ ತಳಿ
ಪ್ರೀತಿಯ ಸೆಲೆಯ , ಗಮ್ಯದೆಡೆ
ಹೆಜ್ಜೆ ಇರಿಸುತ, ಸಹೆನೆಯ ಮುಷ್ಟಿಯಲಿ ಬಿಗಿಹಿಡಿದು
ಜತನದಲಿ ಕಾಪಾಡಿಕೊಳ್ಳುವ, ಆಭಿಲಾಷೆ, ಆಕಾಂಕ್ಷೆ…