ವ್ಯಾಲಂಟೈನ್ ವಿಶೇಷ
ಅನುಪಮ ಈ ಪ್ರೇಮ
ಭೀಮರಾಯ ಹೇಮನೂರ
ಅನುಗಾಲವೂ…
ಅನುದಿನವೂ….
ಅನುಕ್ಷಣವೂ…. ನಿನ್ನ ಜೊತೆಯಲಿರಬಯಸುವೆ
ಅನುಸರಿಸಿಕೊಂಡು, ನಿನ್ನೆಲ್ಲಾ
ಅನುವು, ತನುವು ಅನುವಾಗಿಸಿಕೊಂಡು.
ಅನುಮಾನವೇಕೆ ?
ಅನುರೂಪಳಾದ ಅರ್ಧಾಂಗಿ ನೀನು.
ಅನೂಹ್ಯ ಸುಂದರಿಯ
ಅನುಜಾತೆ ನೀನು !
ಅನುವಂಶೀಯ
ಅನುಶಾಶನವಾಯಿತೋ
ಅನುಗ್ರಹವಾಯಿತೋ
ಅನುರಕ್ತೆಯಾಗಿ ಬಂದೆ ನೀನು, ನಿನಗಾಗಿಯೇ
ಅನುಷ್ಠಾನಗೈದವನು ನಾನು, ನಮ್ಮೀ
ಅನುರಾಗದ ಹಾಡಿಗೆ ನಾನೇ ಪಲ್ಲವಿ
ಅನುಪಲ್ಲವಿ ನೀನು.
ಅನುಪಮ ಜೋಡಿ ನಮ್ಮದು.
ಅನುಚಿತವಲ್ಲದ
ಅನುಸಂದಾನವಿದು,ಬಂಧ
ಅನುಬಂಧವಿದು. ನಿನ್ನ
ಅನುಮತಿಯಿಲ್ಲದೇ ನಿನ್ನೆದೆ ಭಾಷೆಯ
ಅನುವಾದವಿಲ್ಲ, ವಿವಾದವಿಲ್ಲ. ನಿನ್ನ
ಅನುಪಸ್ಥಿತಿಯಲೆನಗೆ
ಅನುಲೋಮವಿಲ್ಲ, ವಿಲೋಮವಿಲ್ಲ
ಅನುಭವವಿಲ್ಲ, ಅನುಭಾವವಿಲ್ಲ
ಅನುಸ್ವಾರವಿಲ್ಲ , ವಿಸರ್ಗವಿಲ್ಲ
ಅನ್ಯ ಸ್ವರ್ಗವಿಲ್ಲ