ವ್ಯಾಲಂಟೈನ್ ವಿಶೇಷ
ಗಜಲ್
ರತ್ನರಾಯಮಲ್ಲ
ನನ್ನ ಹೃದಯ ನನ್ನದಾಗಿ ಉಳಿದಿಲ್ಲ ಮಲ್ಲಿಗೆ
ನಿನ್ನ ಹೊರತು ಬೇರೇನು ಬೇಕಾಗಿಲ್ಲ ಮಲ್ಲಿಗೆ
ಬಂಧಗಳಲ್ಲಿ ಸಡಿಲಗೊಳ್ಳದ ಅಪ್ಪುಗೆ ನಿನ್ನದು
ಎದೆಯುಸಿರ ಬಿಟ್ಟು ನನಗೆ ಬದುಕಿಲ್ಲ ಮಲ್ಲಿಗೆ
ಮುದುಡಿದ ಬಾಳ ಸಸಿಗೆ ನೀರೆರೆದ ನೀರೆ ನೀನು
ಅಧರಗಳಲಿ ಮುಳುಗಿದಾಗ ದಾಹವಿಲ್ಲ ಮಲ್ಲಿಗೆ
ನಾಕದ ಅಮೃತವೂ ಸಪ್ಪೆಯಾಗಿದೆ ನೀನಿಲ್ಲದೆ
ಕೆನ್ನೆ ಮುಂದೆ ಸೇಬಿನಲ್ಲಿ ರುಚಿಯಿಲ್ಲ ಮಲ್ಲಿಗೆ
‘ಮಲ್ಲಿ’ಯ ಆಯುಷ್ಯ ನಿನ್ನ ಸುತ್ತವೆ ಸುತ್ತುತಿದೆ
ಅವನಿಯ ಮಡಿಲಲ್ಲಿ ಶಾಂತಿಯಿಲ್ಲ ಮಲ್ಲಿಗೆ
ತುಂಬು ಹೃದಯದ ಧನ್ಯವಾದಗಳು ಸರ್ ಜೀ