ಕಾವ್ಯ ಸಂಗಾತಿ
ಅನಾಥರಲ್ಲ
ಚಂದ್ರು ಪಿ ಹಾಸನ್

.
ಓಡಿ ಬನ್ನಿ ಗೆಳೆಯರೆಲ್ಲ
ನೋಡಿ ನಮಗೆಲ್ಲ ಬ್ಯಾಗು
ಯಾರೋ ತಂದೋರು ಇವೆಲ್ಲ
ಒಮ್ಮೆ ತಲೆಯ ಬಾಗು
ಅನಾಥರು ನಾವಲ್ಲ
ಎಲ್ಲರೂ ಅಣ್ಣತಮ್ಮಂದಿರು
ನಮಗೆ ಪ್ರೀತಿ ತೋರಿದವರೆಲ್ಲ
ಬಂಧು-ಬಳಗ ನೆಂಟರು
ಚೆನ್ನಾಗಿ ಕಲಿಯುತ್ತಾ
ಹೊಸತು ನಾಡು ಕಟ್ಟುವ
ನೋವುಗಳ ಮರೆಯುತ್ತಾ
ಎಲ್ಲ ಒಂದುಗೂಡುವ
ನಮ್ಮಲ್ಲಿ ಜಾತಿ ಮತವಿಲ್ಲ
ಬಾಳುವ ನಾವೆಲ್ಲಾ ಒಗ್ಗಟ್ಟಿನಲ್ಲಿ
ಪ್ರೀತಿಗೆ ಲೋಪದೋಷ ವಿಲ್ಲ
ಸೇರುವ ಸ್ನೇಹದ ಸಂಕೋಲೆಯಲ್ಲಿ
ತಿದ್ದಿ ಬುದ್ಧಿ ಹೇಳುವವರು
ನಮಗೆ ನಿಮಗೆ ತಂದೆ
ಪ್ರೀತಿ ಮಮತೆ ತೋರುವವರೇ
ನಮ್ಮ ನಿಮ್ಮ ತಾಯಿ
ಆಟ-ಪಾಠ ಮೋಜು-ಮಸ್ತಿ
ಮಾಡಿ ಎಲ್ಲರೊಡನೆ ಬೆರೆಯುವ
ಬೇರೆ ಯಾವ ಆಸ್ತಿಪಾಸ್ತಿ ಸ್ನೇಹದೊಡವೆ ಮಾಡಿ ನಲಿಯುವ
One thought on “ಅನಾಥರಲ್ಲ”