ಕಾವ್ಯ ಸಂಗಾತಿ
ಅವಳ ನಡುವಿನ ಅವನು
ಶ್ರಮಕುಮಾರ್


೧
ಅವಳು ಅವನಿಗಾಗಿ
ತನ್ನತನವನ್ನೇ ಬಿಡುವಾಗ
ಅವನು ಆ ತನವನ್ನೆಲ್ಲ
ಖರೀದಿಸುತಿದ್ದ
೨
ಅವಳು ಒಮ್ಮೊಮ್ಮೆ
ಅವಸರದಿ ಮಾತನಾಡಲು
ಹಿಂಜರಿಯದಿದ್ದಾಗ
ಅವನು ಅವಳೆಲ್ಲಾ ಮಾತುಗಳ
ಕಿತ್ತು ತಿನ್ನುತಿದ್ದ
೩
ಅವಳು ಬೆಂಕಿಯ ಅಪ್ಪಿ
ಕನಿಯುವಾಗ
ಅವನು ತಂಪನೆಯ
ವಾಯು ವಿಹಾರವನ್ನು ಬಯಸಿದ್ದ
೪
ಅವಳು ಬಿಳಿಯ ಪರದೆಯ
ಹೊದ್ದು ಬಿದ್ದಿರುವಾಗ
ಅವನು ಹಳದಿ ಹಾಸಿಗೆಯ
ಕೊಂಡು ತಂದಿದ್ದ
೫
ಅವಳು ಅವನಿಗಾಗಿ
ಎಷ್ಟೆಲ್ಲಾ ಹೆಣಗಿ ಹೆಣವಾಗಿದ್ದಾಗ
ಅವನು ಅವಳನ್ನು ಕೊಳೆಯಲು ಬಿಟ್ಟು
ಹಸಿ ಹಸಿಯಾಗಿ ಅಸಿದು ಮುಕ್ಕಿದ್ದ
೬
ಅವಳ ನಡುವಿನ ಅವನು
ಗೋಡೆಯ ಮೇಲಿರುವ ನಗುವಾಗಿದ್ದಾಗ
ಅವನು ಅದೇ ನಗುವಿನ ಮೇಲೆಯೇ
ಅವಳನ್ನು ನೇತುಹಾಕಿದ್ದ
ಚೆನ್ನಾಗಿದೆ ಕವಿತೆ ಅತ್ಯಂತ ಅರ್ಥಪೂರ್ಣವಾಗಿದೆ
ಧನ್ಯವಾದಗಳು ಸರ್
ಅವಳ ಮೂಕ ವೇದನೆ ಮತ್ತು ರೋಧನೆಗಳನ್ನು ಬಹಳ ಸುಂದರವಾಗಿ ವರ್ಣೀಸಿದ್ದೀರಿ ಅದ್ಭುತವೆಂದರೆ ಇದಲ್ಲವೇ
Chennagi bandhide kavite..