ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅವಳ ನಡುವಿನ ಅವನು

ಶ್ರಮಕುಮಾರ್

೧
ಅವಳು ಅವನಿಗಾಗಿ
ತನ್ನತನವನ್ನೇ ಬಿಡುವಾಗ
ಅವನು ಆ ತನವನ್ನೆಲ್ಲ
ಖರೀದಿಸುತಿದ್ದ

೨
ಅವಳು ಒಮ್ಮೊಮ್ಮೆ
ಅವಸರದಿ ಮಾತನಾಡಲು
ಹಿಂಜರಿಯದಿದ್ದಾಗ
ಅವನು ಅವಳೆಲ್ಲಾ ಮಾತುಗಳ
ಕಿತ್ತು ತಿನ್ನುತಿದ್ದ

೩
ಅವಳು ಬೆಂಕಿಯ ಅಪ್ಪಿ
ಕನಿಯುವಾಗ
ಅವನು ತಂಪನೆಯ
ವಾಯು ವಿಹಾರವನ್ನು ಬಯಸಿದ್ದ

೪
ಅವಳು ಬಿಳಿಯ ಪರದೆಯ
ಹೊದ್ದು ಬಿದ್ದಿರುವಾಗ
ಅವನು ಹಳದಿ ಹಾಸಿಗೆಯ
ಕೊಂಡು ತಂದಿದ್ದ

೫
ಅವಳು ಅವನಿಗಾಗಿ
ಎಷ್ಟೆಲ್ಲಾ ಹೆಣಗಿ ಹೆಣವಾಗಿದ್ದಾಗ
ಅವನು ಅವಳನ್ನು ಕೊಳೆಯಲು ಬಿಟ್ಟು
ಹಸಿ ಹಸಿಯಾಗಿ ಅಸಿದು ಮುಕ್ಕಿದ್ದ

೬
ಅವಳ ನಡುವಿನ ಅವನು
ಗೋಡೆಯ ಮೇಲಿರುವ ನಗುವಾಗಿದ್ದಾಗ
ಅವನು ಅದೇ ನಗುವಿನ ಮೇಲೆಯೇ
ಅವಳನ್ನು ನೇತುಹಾಕಿದ್ದ


About The Author

4 thoughts on “ಅವಳ ನಡುವಿನ ಅವನು”

  1. ಅವಳ ಮೂಕ ವೇದನೆ ಮತ್ತು ರೋಧನೆಗಳನ್ನು ಬಹಳ ಸುಂದರವಾಗಿ ವರ್ಣೀಸಿದ್ದೀರಿ ಅದ್ಭುತವೆಂದರೆ ಇದಲ್ಲವೇ

Leave a Reply

You cannot copy content of this page

Scroll to Top