ಗಝಲ್

ಗಝಲ್

ಸರೋಜಾ ಶ್ರೀಕಾಂತ್

ಶೃಂಗಾರದ ಸಿರಿಗೆ ಮನವು ಗೆಲುವಿನಲಿ ನಲಿದಿದೆ ಸಖ
ಚಿತ್ತಾರದ ಕಸೂತಿಯೂ ಆತುರಕೆ ಉಲಿದಿದೆ ಸಖ

ಹಸಿರ ಸೀರೆಯಂಚಿಗೆ ಹೊನ್ನ ಬಣ್ಣದ ಮಣಿ ಸಾಲು
ಮನದರಸನ ಅರಸುತ್ತ ಪ್ರೇಮಗೀತೆ ಹಾಡುತ್ತಿದೆ ಸಖ

ಕೋಮಲ ಕರದ ಮದರಂಗಿಯೇ ಕರೆಯೋಲೆ
ಮೆಲ್ಲನೆ ನೀ ಬಳಿ ಬಂದು ಓದಬೇಕೆಂದು ಕಾಯುತ್ತಿದೆ ಸಖ

ಚುಕ್ಕಿ ಬಳೆಗಳೆಲ್ಲ ಹಸಿರನ್ನಪ್ಪಿ ನಗುತ್ತಿವೆ ಹೊಳೆಯುತ
ತುಸು ಗಮನಿಸುತ್ತಲೇ ಆಲಿಸು ಅಲ್ಲೂ ಒಲವಿದೆ ಸಖ

ಇನಿಯನ ಮಧುರಾಲಾಪಕೆ ಸದ್ದಿಲ್ಲದೆ ಹರಸುತ್ತಿದೆ ‘ರೋಜಾ’
ಪ್ರೀತಿ ಸ್ಪರ್ಶದ ಅಮಲಿನ ಘಮದಲ್ಲೂ ನಿನ್ನದೇ ಹೆಸರಿದೆ ಸಖ


One thought on “ಗಝಲ್

Leave a Reply

Back To Top